ಬಂಟ್ವಾಳ, ನವೆಂಬರ್ 07, 2025 (ಕರಾವಳಿ ಟೈಮ್ಸ್) : ಫರಂಗಿಪೇಟೆ ಸಮೀಪದ ಕುಂಪಣಮಜಲು ನಿವಾಸಿ ಅಬ್ದುಲ್ ಅಝೀಝ್ ಅವರ ಪತ್ನಿ ನೆಫೀಸಾ (56) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪಾಣೆಮಂಗಳೂರು ಆಲಡ್ಕ ಮರ್ಹೂಂ ಪೊಲೀಸ್ ಅಬ್ದುಲ್ ಖಾದರ್ ಅವರ ಪುತ್ರಿ, ಪತ್ರಕರ್ತ, ಕರಾವಳಿ ಟೈಮ್ಸ್ ಪ್ರಧಾನ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಅವರ ಸಹೋದರಿ.
ಮೃತರು ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಶಾಕಿರ್ ಕುಂಪಣಮಜಲು, ಸಾಲೆ-ಉಳಾಯಿಬೆಟ್ಟು ಮದೀನಾ ಮಸೀದಿ ಇಮಾಂ ಝಮೀನ್ ಅನ್ಸಾರಿ ಸಹಿತ ನಾಲ್ಕು ಮಂದಿ ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಶನಿವಾರ ಸುಬುಹಿ ನಮಾಝ್ ಬಳಿಕ ಫರಂಗಿಪೇಟೆ ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಕ್ರಿಯೆ ನಡೆಯಲಿದೆ.













0 comments:
Post a Comment