ಮಂಗಳೂರು, ನವೆಂಬರ್ 28, 2025 (ಕರಾವಳಿ ಟೈಮ್ಸ್) : ನಗರದ ಸುರತ್ಕಲ್-ಕಾನ ನಿವಾಸಿ ಶೇಖಬ್ಬ (61) ಎಂಬವರು ನವೆಂಬರ್ 27 ರಂದು ಮನೆಯ ಪಕ್ಕದಲ್ಲಿದ್ದ ಅವರ ಮಾಲಕತ್ವದ ಅಲ್-ಶಿಫಾ ಜನರಲ್ ಸ್ಟೋರನ್ನು ತೆರೆಯಲು ಬೆಳಿಗ್ಗೆ ಮನೆಯಿಂದ ಹೋದವರು ಅಂಗಡಿಗೂ ಹೋಗದೇ ಮನೆಗೂ ಬಾರದೆ ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ : 5.9 ಅಡಿ ಎತ್ತರ, ಬಿಳಿ ಮೈಬಣ್ಣ, ದುಂಡು ಮುಖ, ತೆಳು ಮೀಸೆ, ಬೊಕ್ಕ ತಲೆ, ಸಾಧಾರಣ ಶರೀರ ಹೊಂದಿರುತ್ತಾರೆ. ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಸುರತ್ಕಲ್ ಪೆÇೀಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














0 comments:
Post a Comment