ಪುತ್ತೂರು, ನವೆಂಬರ್ 29, 2025 (ಕರಾವಳಿ ಟೈಮ್ಸ್) : ತಾಲೂಕಿನ ಬಲ್ನಾಡು ಗ್ರಾಮದ ಬಬ್ಬಿಲಿ ಎಂಬಲ್ಲಿ 2022 ರ ಫೆಬ್ರವರಿ 27 ರಂದು ನಡೆದ ಕಳ್ಳತನ ಪ್ರಕರಣದ ಎ1 ಆರೋಪಿ ಮಹಮ್ಮದ್ ಆಶ್ರಫ್ ತಾರಿಗುಡ್ಡೆ ಹಾಗೂ ಎ2 ಆರೋಪಿ ಮಹಮ್ಮದ್ ಸಲಾಂ ಎಂಬವರಿಗೆ ನ್ಯಾಯಾಲಯ ನವೆಂಬರ್ 29 ರಂದು ಶಿಕ್ಷೆ ವಿಧಿಸಿ ಆದೇಶಿಸಿದೆ.
ನ್ಯಾಯಾಧೀಶ ದೇವರಾಜ್ ವೈ.ಎಚ್ ಅವರು ಈ ತೀರ್ಪು ನೀಡಿದ್ದು, ಆರೋಪಿಗಳಿಗೆ 3 ವರ್ಷಗಳ ಸಾದಾ ಜೈಲು ಮತ್ತು 10 ಸಾವಿರ ರೂಪಾಯಿ ದಂಡ ಹಾಗೂ ದಂಡ ಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸದ್ರಿ ಪ್ರಕರಣದಲ್ಲಿ ಪೆÇಲೀಸ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳ್ಳಿಗೆ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾದ ಚೇತನಾ ದೇವಿ ಅವರು ವಾದ ಮಂಡಿಸಿದ್ದಾರೆ.














0 comments:
Post a Comment