ಪುತ್ತೂರು, ನವೆಂಬರ್ 29, 2025 (ಕರಾವಳಿ ಟೈಮ್ಸ್) : ಇ.ಎನ್.ಟಿ. ಕ್ಲಿನಿಕಿನಲ್ಲಿ ಪರಿಚಯದವರನ್ನು ಬೇಗ ಒಳಗೆ ಬಿಟ್ಟಿಲ್ಲ ಎಂದು ವ್ಯಕ್ತಿಯೋರ್ವ ದಾಂಧಲೆ ನಡೆಸಿದ ಘಟನೆ ಪುತ್ತೂರು-ದರ್ಬೆಯಲ್ಲಿ ಶನಿವಾರ ನಡೆದಿದೆ.
ದಾಂಧಲೆ ನಡೆಸಿದ ಆರೋಪಿಯನ್ನು ಪುತ್ತೂರು-ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಪುತ್ತೂರು-ದರ್ಬೆಯಲ್ಲಿರುವ ಡಾ ರಾಮಮೋಹನ್ ಎಂಬವರಿಗೆ ಸೇರಿದ ಇ.ಎನ್.ಟಿ. ಕ್ಲಿನಿಕಿನಲ್ಲಿ ಶನಿವಾರ ಈ ದಾಂಧಲೆ ನಡೆದಿದೆ.
ಕ್ಲಿನಿಕಿನಲ್ಲಿ ಸಲಹೆಗೆ ಬಂದ ವ್ಯಕ್ತಿಗಳು ಕ್ಯೂನಲ್ಲಿ ಕಾಯುತ್ತಿರುವಾಗ, ಹೊರಗಡೆ ಪಾರ್ಕಿಂಗ್ ಶುಲ್ಕ ಪಡೆದುಕೊಳ್ಳುವ ಆರೋಪಿ ಇಬ್ರಾಹಿಂ ಕ್ಲಿನಿಕ್ ಒಳಗೆ ಬಂದು ಆತನ ಪರಿಚಯದವರನ್ನು ಬೇಗನೆ ಒಳಗೆ ಕಳುಹಿಸಲಿಲ್ಲ ಎಂಬ ನೆಪವಾಗಿಟ್ಟು ದಾಂಧಲೆ ಎಬ್ಬಿಸಿ, ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬಾತನಿಗೆ ಹಲ್ಲೆ ನಡೆಸಿ, ಕ್ಲಿನಿಕ್ ಪೀಠೋಪಕರಣಗಳಿಗೆ ಹಾನಿ ಉಂಟುಮಾಡಿ ಹೊರಗಡೆ ಕಾಯುತ್ತಿದ್ದ ಇತರ ರೋಗಿಗಳಿಗೆ ಭಯ ಉಂಟುಮಾಡಿ, ಅವ್ಯಾಚವಾಗಿ ಬೈದು ಅಲ್ಲಿಂದ ಹೋಗಿರುತ್ತಾನೆ. ಕ್ಲಿನಿಕ್ ಮಾಲಕ ಡಾ ರಾಮಮೋಹನ್ ಅವರು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಇಬ್ರಾಹಿಂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.














0 comments:
Post a Comment