ಮಂಗಳೂರು, ನವೆಂಬರ್ 24, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಮುಲ್ಕಿ, ಉಳ್ಳಾಲ ಹಾಗೂ ಬಂಟ್ವಾಳ ತಾಲೂಕುಗಳಿಗೆ ಭೇಟಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯದ ವೇಳೆ ಹೆಜ್ಜೇನು, ಹುಳ, ನಾಯಿಗಳು ಕಚ್ಚಿ ಹಾಗೂ ರಸ್ತೆಯ ಅಪಘಾತಗಳಿಂದ ಅನಾರೋಗ್ಯಕ್ಕೆ ತುತ್ತಾದ ಶಿಕ್ಷಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಅವರನ್ನು ಸನ್ಮಾನಿಸಿದರು.
ಕ್ಲಿಷ್ಟಕರ ಸನ್ನಿವೇಶದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಮುಲ್ಕಿ ತಾಲೂಕಿ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ, ಮುಲ್ಕಿ-ಕೆರೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ನವೀನ್ ಡಿ’ಸೋಜ, ಮಂಗಳೂರು ತಾಲೂಕು, ಬಡಗ ಎಕ್ಕಾರು ಸರಕಾರಿ ಪ್ರೌಢಶಾಲಾ ಶಿಕ್ಷಕಿ ವಿನ್ನಿ ನಿರ್ಮಲ್ ಡಿ’ಸೋಜ, ಮರಕಡ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಸರಿತ ಡಿ’ಸೋಜ, ಉಳ್ಳಾಲ ತಾಲೂಕು, ಮುನ್ನೂರು-ರಾಣಿಪುರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಗ್ಲೊರಿಯಾ ಅನುಶಿಯ ಲೋಬೋ, ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರೋಜಾ, ಬಂಟ್ವಾಳ ತಾಲೂಕು, ಸಜಿಪಮೂಡ ಸರಕಾರಿ ಪ್ರೌಢಶಾಲಾ ಶಿಕ್ಷಕ ವೆಂಕಟರಮಣ ಆಚಾರ್, ಕಾವಳಮೂಡೂರು ಸರಕಾರಿ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಸುರೇಖಾ ಅವರನ್ನು ಡೀಸಿ ಸನ್ಮಾನಿಸಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂÀ ಕಂದಾಯ ನಿರೀಕ್ಷಕರುಗಳು ಜೊತೆಗಿದ್ದರು.




















0 comments:
Post a Comment