ಮಂಗಳೂರು, ನವೆಂಬರ್ 21, 2025 (ಕರಾವಳಿ ಟೈಮ್ಸ್) : ಕರ್ನಾಟಕ ಮಹಾನಗರಪಾಲಿಕೆಯ ಕಾಯ್ದೆಯಡಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಕರ್ನಾಟಕ ನಗರಪಾಲಿಕೆಗಳ ಕಟ್ಟಡ ಮಾದರಿ ಉಪವಿಧಿ-2017 ಗಳಿಗೆ ತಿದ್ದುಪಡಿಗೊಳಿಸಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕಟ್ಟಡಗಳ ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಿಕೊಂಡು ಪರಿಷ್ಕøತ ಕಟ್ಟಡ ನಕ್ಷೆಗಳಿಗೆ ಅನುಮೋದನೆ ನೀಡಲು ಪ್ರಮಾಣವನ್ನು ಸರಕಾರ ನಿಗದಿಪಡಿಸಿದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಪರವಾನಿಗೆ ಪಡೆದು ಪರವಾನಿಗೆಯನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ನಿಗದಿಪಡಿಸಲಾದ ದಂಡವನ್ನು ಪಾವತಿಸಿಕೊಂಡು ಪರಿಷ್ಕøತ ನಕ್ಷೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಶುಲ್ಕದ ಪ್ರಮಾಣ ಈ ಕೆಳಕಂಡಂತಿದೆ.
1) ಕಟ್ಟಡ ಪರವಾನಿಗೆ ಪಡೆದು ಸೆಟ್ ಬ್ಯಾಕ್/ ಕವರೇಜ್ ಗಳಲ್ಲಿ ಶೇ. 15ರ ಮಿತಿಯೊಳಗೆ ಉಲ್ಲಂಘನೆ ಮಾಡಿದಲ್ಲಿ ಪ್ರತಿ ಚದರ ಮೀಟರಿಗೆ ವಸತಿ/ ಕೈಗಾರಿಕೆ/ ಇತರೆ ಉದ್ದೇಶದ ಕಟ್ಟಡಕ್ಕೆ 2 ಸಾವಿರ, ವಾಣಿಜ್ಯ ಉದ್ದೇಶದ ಕಟ್ಟಡಕ್ಕೆ 3 ಸಾವಿರ ರೂಪಾಯಿ ಪಾವತಿಸಬೇಕಾಗಿರುತ್ತದೆ.
2) ಕಟ್ಟಡ ಪರವಾನಿಗೆ ಪಡೆದು ಶೇ. 5ರ ಮಿತಿಯೊಳಗೆ ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಾರ್ ಪಾರ್ಕಿಂಗ್ ಒಂದಕ್ಕೆ 5 ಸಾವಿರ ರೂಪಾಯಿ ಪಾವತಿಸಬೇಕಾಗಿರುತ್ತದೆ. ಎಫ್.ಎ.ಆರ್ ಉಲ್ಲಂಘನೆಗೆ ಪ್ರತಿ ಚ.ಮೀಗೆ ವಸತಿ/ ಕೈಗಾರಿಕೆ/ ಇತರೆ ಉದ್ದೇಶದ ಕಟ್ಟಡಕ್ಕೆ 2 ಸಾವಿರ ರೂಪಾಯಿ, ವಾಣಿಜ್ಯ ಕಟ್ಟಡಕ್ಕೆ 3 ಸಾವಿರ ರೂಪಾಯಿ ಪಾವತಿಸಬೇಕಾಗಿರುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














0 comments:
Post a Comment