ವೇಣೂರು, ನವೆಂಬರ್ 21, 2025 (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 10 ರಂದು ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ವೇಣೂರು ನಿವಾಸಿ ಮಹಮ್ಮದ್ ಇರ್ಷಾದ್ (25) ಹಾಗೂ ಪಡಂಗಡಿ ನಿವಾಸಿ ಸಾದಿಕ್ ಖಾನ್ (26) ಎಂದು ಹೆಸರಿಸಲಾಗಿದೆ. ಆರೋಪಿಗಳು ಕದ್ದಿದ್ದ ಕೆಎ18 ಜೆ6348 ನೋಂದಣಿ ಸಂಖ್ಯೆಯ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು, ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ (28) ಎಂಬವರು, ನವೆಂಬರ್ 10 ರಂದು ರಾತ್ರಿ ವೇಣೂರು ಠಾಣಾ ವ್ಯಾಪ್ತಿಯ ಪಾನೂರು ಶ್ರೀ ಗುರುನಾರಾಯಣ ವೃತ್ತದ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು, ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಕೈಗೆತ್ತಿಕೊಂಡ ವೇಣೂರು ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ ಬೆಳ್ತಂಗಡಿ ಡಿವೈಎಸ್ಪಿ ಶ್ರೀಮತಿ ರೋಹಿಣಿ ಸಿ.ಕೆ. ಅವರ ನಿರ್ದೇಶನದಂತೆ, ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ. ಸುಬ್ಬಾಪೂರ ಮಠ ಅವರ ಮಾರ್ಗದರ್ಶನದಲ್ಲಿ ವೇಣೂರು ಪೆÇಲೀಸ್ ಠಾಣಾ ಪಿಎಸ್ಸೈಗಳಾದ ಅಕ್ಷಯ್ ಡವಗಿ, ಶ್ರೀಮತಿ ಓಮನ ಎನ್. ಹಾಗೂ ಎಎಸ್ಸೈ ವೆಂಕಟೇಶ್ ನಾಯ್ಕ, ಎಚ್.ಸಿ. ಕೃಷ್ಣ, ಮಹಿಳಾ ಎಚ್ ಸಿ ಶ್ರೀಮತಿ ಕೇಶವತಿ, ಪಿ.ಸಿ.ಗಳಾದ ಬಸವರಾಜ್, ಮೋಹನ್ ಅವರನ್ನೊಳಗೊಂಡ ತಂಡ ಕಾರ್ಯಚರಣೆ ನಡೆಸಿದೆ.
















0 comments:
Post a Comment