ಮಂಗಳೂರು, ನವೆಂಬರ್ 05, 2025 (ಕರಾವಳಿ ಟೈಮ್ಸ್) : ಪತಿಯ ಮಾನಸಿಕ ಹಾಗೂ ದೈಹಿಕ ಕಿರುಕುಳ ಕಾರಣದಿಂದ ಪತ್ನಿ ವಿಷ ಪದಾರ್ಥ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಬಗ್ಗೆ ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯನ್ನು ಬಂಟ್ವಾಳ ತಾಲೂಕು, ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ಆನಂದ ರೈ ಎಂಬವರ ಪುತ್ರಿ ಶ್ರುತಿ ಎಂದು ಹೆಸರಿಸಲಾಗಿದೆ. ಶ್ರುತಿಯನ್ನು ಸುಮಾರು 15 ವರ್ಷದ ಹಿಂದೆ ಮನೋಜ್ ಎಂಬವನಿಗೆ ಮದುವೆ ಮಾಡಿಕೊಡಲಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮನೋಜ್ ಸುಮಾರು ಒಂದೂವರೆ ವರ್ಷಗಳಿಂದ ಶ್ರುತಿಯ ಜೊತೆ ಕೊಡಿಪ್ಪಾಡಿ ಎಂಬಲ್ಲಿ ಮನೆ ಮಾಡಿ ವಾಸ್ತವ್ಯ ಇದ್ದು, ಮದುವೆಯ ಬಳಿಕ ಒಂದು ವರ್ಷದ ಬಳಿಕ ಮನೋಜ್ ಪತ್ನಿ ಶ್ರುತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು, ಹಾಗೂ ತಂದೆ ಜೊತೆ ಮಾತನಾಡಬಾರದು ಎಂದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅವಳು ಕೆಲವೊಂದು ಬಾರಿ ಮನೆಗೆ ಬಂದು ಹೋಗುತ್ತಿದ್ದು ಈ ವಿಚಾರ ತಿಳಿದು ಮನೋಜನು ಶ್ರುತಿಯ ಜೊತೆ ಜಗಳವಾಡುತ್ತಿದ್ದ.
ಸುಮಾರು ಒಂದು ವರ್ಷಗಳಿಂದ ಶ್ರುತಿಯು ತಂದೆ ಮನೆಗೆ ಬಾರದೇ ಇದ್ದು, ವಾರದ ಹಿಂದೆ ತಂದೆ-ತಾಯಿ ಶ್ರುತಿಯಲ್ಲಿ ಮಾತನಾಡಿದಾಗ “ನಿಮ್ಮ ಜೊತೆ ಮಾತನಾಡಲು ನನ್ನನ್ನು ಬಿಡುವುದಿಲ್ಲ. ಫೆÇೀನ್ ಕರೆ ಮಾಡಿ ಮಾತನಾಡಿದರೆ ಮೊಬೈಲ್ ಚೆಕ್ ಮಾಡಿ ನನಗೆ ಬೈಯುತ್ತಾರೆ. ನನಗೆ ಮನೆಯಲ್ಲಿ ಕಿರುಕುಳ ನೀಡುತ್ತಾರೆ” ಎಂದು ಹೇಳಿದ್ದಳು. ಬಳಿಕ ನವೆಂಬರ್ 4 ರಂದು ಬೆಳಗ್ಗೆ ಸುಮಾರು 10.30 ಗಂಟೆಗೆ ಶ್ರುತಿಯ ಸಹೋದರಿ ದೀಪಿಕಾ ಎಂಬವಳಿಗೆ ಮನೋಜ್ ಕರೆ ಮಾಡಿ ಶ್ರುತಿ ವಿಷ ಪದಾರ್ಥ ಸೇವಿಸಿದವಳನ್ನು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲಿಸಿರುವ ವಿಚಾರವನ್ನು ತಿಳಿಸಿದ್ದಾನೆ. ತಕ್ಷಣ ತಂದೆ-ತಾಯಿ ಎ ಜೆ ಆಸ್ಪತ್ರೆಗೆ ಹೋಗಿ ವಿಚಾರ ತಿಳಿದಾಗ ಶ್ರುತಿ ಸಾಯಂಕಾಲ ಇಲಿ ಪಾಷಾಣ ಸೇವಿಸಿದ್ದು, ಬೆಳಗ್ಗೆ ವಾಂತಿ ಮಾಡಿಕೊಂಡಿದ್ದವಳನ್ನು ಮನೋಜ್ ಚಿಕಿತ್ಸೆಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ವಿಚಾರ ತಿಳಿಸಿದ್ದಾನೆ. ಚಿಕಿತ್ಸೆ ಪಡೆಯುತ್ತಿದ್ದ ಶ್ರುತಿ ಸಾಯಂಕಾಲ 5 ಗಂಟೆಗೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರುತಿ ಆತ್ಮಹತ್ಯೆ ಮಾಡಿಕೊಳ್ಳಲು ಅವಳ ಗಂಡ ಮನೋಜ್ ಅವಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವುದೇ ಕಾರಣ ಎಂದು ಶ್ರುತಿಯ ತಂದೆ ನೀಡಿದ ದೂರಿನಂತೆ ದ ಕ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2025 ಕಲಂ 85, 108 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.















0 comments:
Post a Comment