ಬಂಟ್ವಾಳ, ನವೆಂಬರ್ 05, 2025 (ಕರಾವಳಿ ಟೈಮ್ಸ್) : ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ 2 ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ವೀರಕಂಭ ಗ್ರಾಮದ ಮಂಗಿಲಪದವು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ನ 4 ರಂದು ಸಂಜೆ ನಡೆದಿದೆ.
ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ಅವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ವೀರಕಂಭ ಗ್ರಾಮದ ಮಂಗಿಲಪದವು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸಂಜೆ 4.30ರ ವೇಳೆಗೆ ವಿಟ್ಲ ಕಡೆಯಿಂದ ಬಂದ ಎರಡು ಲಾರಿಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ ಈ ಅಕ್ರಮ ಕಲ್ಲು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಕೆಎ19 5951 ಹಾಗೂ ಕೆಎ18 ಎ0523 ನೋಂದಣಿ ಸಂಖ್ಯೆಯ ಎರಡು ಲಾರಿಗಳಲ್ಲಿ ಚಾಲಕರಾದ ಮುಹಮ್ಮದ್ ಮಜೀದ್ (43) ಹಾಗೂ ಮಹಮ್ಮದ್ ನೌಷಾದ್ (31) ಎಂಬವರು ಅಕ್ರಮ ಕಲ್ಲು ಸಾಗಾಟ ಮಾಡುತ್ತಿದ್ದರು. ಎರಡೂ ಲಾರಿಗಳಲ್ಲಿ ತಲಾ 9 ಸಾವಿರ ರೂಪಾಯಿ ಮೌಲ್ಯದ 500 ಕೆಂಪು ಕಲ್ಲುಗಳಿದ್ದವು. ಕಲ್ಲು ಸಾಗಾಟಕ್ಕೆ ಸಂಬಂಧಿಸಿದಂತೆ ಚಾಲಕರಲ್ಲಿ ಯಾವುದೇ ಪರವಾನಿಗೆ ಇರಲಿಲ್ಲ.
ಮಜೀದ್ ಚಲಾಯಿಸುತ್ತಿದ್ದ ಲಾರಿ ಆಸಿಫ್ ಕಕ್ಕಿಂಜೆ ಎಂಬವರಿಗೆ ಸೇರಿದ್ದು, ಅದನ್ನು ಮಜೀದ್ ಹಾಗೂ ಅವರ ಭಾವ ಲತೀಫ್ ಸೋಮಂತಡ್ಕ ಅವರು ಬಳಸುತ್ತಿದ್ದರು. ನೌಷಾದ್ ಚಲಾಯಿಸಿದ ಲಾರಿ ಇಕ್ಬಾಲ್ ಲಾಯಿಲ ಎಂಬವರಿಗೆ ಸೇರಿದ್ದಾಗಿದೆ. ತಲಾ 5 ಲಕ್ಷ ರೂಪಾಯಿ ಅಂದಾಜು ಮೌಲ್ಯದ ಎರಡೂ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment