ಬಂಟ್ವಾಳ, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಅನಾರೋಗ್ಯ ಪೀಡಿತ ವೃದ್ದರೋರ್ವರು ಮನೆಯಂಗಳದ ಬದಿಯ ಮರಕ್ಕೆ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ಅಡ್ಯನಡ್ಕ-ಮೆಗಳಗುಳಿ ಎಂಬಲ್ಲಿ ನ 25 ರಂದು ಸಂಭವಿಸಿದೆ.
ಮೃತರನ್ನು ಇಲ್ಲಿನ ನಿವಾಸಿ ಶಿವಪ್ಪ ಶೆಟ್ಟಿ (80) ಎಂದು ಹೆಸರಿಸಲಾಗಿದೆ. ಇವರು ಕಳೆದ ಕೆಲ ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ನ 25 ರಂದು ಮನೆ ಮಂದಿ ತೋಟದಿಂದ ಹುಲ್ಲು ತರಲು ತೆರಳಿದ್ದು, ಬರುವಷ್ಟರಲ್ಲಿ ಮನೆಯಂಗಳದ ಬಳಿ ಇರುವ ಪೇರಳೆ ಮರದ ಬಾಗಿರುವ ಗೆಲ್ಲಿಗೆ ಲುಂಗಿ ಮತ್ತು ಬೈರಾಸನ್ನು ಕುಣಿಕೆ ಮಾಡಿ ನೇತಾಡುತ್ತಿದ್ದರು. ತಕ್ಷಣ ಅವರನ್ನು ನೇಣು ಕುಣಿಕೆಯಿಂದ ಬಿಡಿಸಿ ಉಪಚರಿಸಿ ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಅಳಿಯ ರಾಧಾಕೃಷ್ಣ ರೈ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment