ಬಂಟ್ವಾಳ, ನವೆಂಬರ್ 26, 2025 (ಕರಾವಳಿ ಟೈಮ್ಸ್) : ತಾಲೂಕು ಪುದು ಗ್ರಾಮ ಪಂಚಾಯತ್ ಆಡಳಿತದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರಮ್ಲಾನ್ ಮಾರಿಪಳ್ಳ ಅವರು ಪ್ರಥಮ ಸಾಮಾನ್ಯ ಸಭೆಯಲ್ಲೇ ಕೈಗೊಂಡ ನಿರ್ಣಯದಂತೆ ಕಾರ್ಯಾಚರಣೆ ನಡೆಸಿ ಹೋಟೆಲ್ ತ್ಯಾಜ್ಯ ಎಸೆದ ವಾಹನಕ್ಕೆ ದಂಡ ವಿಧಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್ ಎಂಬಲ್ಲಿ ನ 23 ರ ತಡರಾತ್ರಿ ಹೋಟೆಲ್ ಉದ್ಯಮ ನಡೆಸುತ್ತಿರುವ ಮಂದಿ ತ್ಯಾಜ್ಯವನ್ನು ಎಸೆಯಲು ಬಂದಾಗ ಸ್ಥಳೀಯರು ಮುತ್ತಿಗೆ ಹಾಕಿ ಅವರನ್ನು ತಡೆದಿದ್ದಾರೆ. ಮಾಹಿತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರಿಗೆ ನೀಡಿದ್ದು, ತಕ್ಷಣ ಅದ್ಯಕ್ಷರು ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಡಾ ಸ್ಮೃತಿ ಅವರ ಮೂಲಕ ಕಸ ಎಸೆಯಲು ಬಂದವರಿಂದ 3 ಸಾವಿರ ರೂಪಾಯಿ ದಂಡ ವಿಧಿಸಿ ವಸೂಲಿ ಮಾಡಿದ್ದಲ್ಲದೆ ಸಂಬಂಧಪಟ್ಟವರಿಗೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದವರಿಗೆ ಅಧ್ಯಕ್ಷರು ಪ್ರಥಮ ಸಾಮಾನ್ಯ ಸಭೆಯಲ್ಲಿ ಘೋಷಿಸಿದಂತೆ 1 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.














0 comments:
Post a Comment