ಬಂಟ್ವಾಳ, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಕಲ್ಲು ಸಹಿತ ಲಾರಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ನ 11 ರಂದು ನಡೆದಿದೆ.
ವಿಟ್ಲ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಕೆ ಪ್ರಕಾಶ್ ದೇವಾಡಿಗ ಅವರು ಸಿಬ್ಬಂದಿಗಳೊಂದಿಗೆ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುವ ವೇಳೆ ನ 11 ರಂದು ಸಂಜೆ 5.30ರ ವೇಳೆಗೆ ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಲಾರಿಯನ್ನು ತಪಾಸಣೆಗೆ ನಿಲ್ಲಿಸಿದಾಗ ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಅಬ್ದುಲ್ ಸಲಾಂ (33) ಎಂಬಾತ ಲಾರಿ ಚಾಲಕನಾಗಿದ್ದು, ಕೆಂಪು ಕಲ್ಲು ಸಾಗಾಟ ಮಾಡಲು ಯಾವುದೇ ಪರವಾನಿಗೆ ಹೊಂದಿರಲಿಲ್ಲ. ಲಾರಿ ಸಹಿತ ಲಾರಿಯಲ್ಲಿದ್ದ 200 ಕೆಂಪು ಕಲ್ಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment