ಬಂಟ್ವಾಳ, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಜ್ವರಕ್ಕೆ ಮದ್ದು ಸೇವಿಸಿ ಕೆಲಸಕ್ಕೆ ಹೋಗಿ ಸುಸ್ತಾಗಿ ಬಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸಜಿಪಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ನ 10 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಅಶೋಕ (53) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪತ್ನಿ ಶ್ರೀಮತಿ ಶಾರದಾ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಗಂಡ ಅಶೋಕ ಅವರಿಗೆ ನ 6ರಂದು ಚಳಿ ಜ್ವರ ಬರುತ್ತಿರುವುದಾಗಿ ಸಂಜೆ ವೇಳೆ ಮನೆಗೆ ಬಂದು ಜ್ವರದ ಮಾತ್ರೆ ಸೇವಿಸಿ, ಮರು ದಿನ ಕೆಲಸಕ್ಕೆ ಹೋದವರಿಗೆ ಸೊಂಟ ನೋವು, ಸುಸ್ತು ಆಗುತ್ತದೆ ಎಂದು ಮನೆಗೆ ವಾಪಾಸು ಬಂದು ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ನ 9 ರಂದು ಅವರಿಗೆ ಕಾಲು ಸೆಳೆತ ಹಾಗೂ ಕುತ್ತಿಗೆ ನೋವು ಉಂಟಾಗಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ವೈದ್ಯರು ನರಸಮಸ್ಯೆ ಇರಬಹುದು ಎಂದು ಅಡ್ಮಿಟ್ ಆಗಲು ಸೂಚಿಸಿದರೂ ಅಡ್ಮಿಟ್ ಆಗಲು ನಿರಾಕರಿಸಿ ಔಷಧಿ ಪಡೆದು ಮನೆಗೆ ಬಂದು ವಿಶ್ರಾಂತಿ ಪಡೆದಿದ್ದರು. ನ 10 ರಂದು ಸಂಜೆ 6.30 ಗಂಟೆಗೆ ತುಂಬಾ ಸುಸ್ತು ಆಗುವುದಾಗಿ, ಮಲಗಿದ್ದಲ್ಲೇ ನರಳಾಡುತ್ತಿದ್ದವರನ್ನು ಅಶೋಕ್, ಅವಿನಾಶ್ ಮತ್ತು ಮನೋಜ್ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ರಾತ್ರಿ 7.15 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇೀಲಿಸ್ ಠಾಣೆಯಲ್ಲಿ ಯು ಡಿ ಆರ್ ಪ್ರಕರಣ ದಾಖಲಾಗಿದೆ.















0 comments:
Post a Comment