ಮಂಗಳೂರು, ಡಿಸೆಂಬರ್ 06, 2025 (ಕರಾವಳಿ ಟೈಮ್ಸ್) : ಮಂಗಳೂರಿನ ಪಿಡಿಜೆ ನ್ಯಾಯಾಲಯವು ಮಾದಕವಸ್ತು ಮಾರಾಟ ಮಾಡಿದ 5 ಮಂದಿ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಅಪರಾಧಿಗಳನ್ನು ಮೂಲತಃ ಜೂಬಾ ರಿಪಬ್ಲಿಕ್ ಆಫ್ ಸೌಥ್ ಸುಡಾನ್ ನಿವಾಸಿ, ಪ್ರಸ್ತುತ ಬೆಂಗಳೂರು ನಗರ ಗುಂಟೂರು ವರ್ತೂರು ಪಾಳ್ಯ ನಾರಾಯಣಪ್ಪ ಕಟ್ಟಡದಲ್ಲಿ ವಾಸ್ತವ್ಯ ಹೊಂದಿರುವ ಡೇನಿಯಲ್ ಜಸ್ಟಿನ್ ಲೋಬೋ ಎಂಬವರ ಪುತ್ರ ಲೋವೆಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ-ಪಲ್ಲಂ ನಿವಾಸಿ ಮಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ರಮೀಜ್ ಅಲಿಯಾಸ್ ಮಹಮ್ಮದ್ ರಮೀಜ್, ಕಾಸರಗೋಡು ನಿವಾಸಿ ಮಹಮ್ಮದ್ ಎಂಬವರ ಪುತ್ರ ಮೊಯಿದ್ದೀನ್ ರಶೀದ್, ಉಪ್ಪಳ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅವರ ಪುತ್ರ ಅಬ್ದುಲ್ ರಾವೂಫ್, ಬೆಂಗಳೂರು ಮಡಿವಾಳ ನಿವಾಸಿ ಸುಬ್ರಮಣಿ ಎಂಬವರ ಪುತ್ರಿ ಸಬಿತಾ ಅಲಿಯಾಸ್ ಚಿಂಚು ಎಂದು ಹೆಸರಿಸಲಾಗಿದೆ.
ಈ ಎಲ್ಲಾ ಆರೋಪಿಗಳಿಗೆ ಪ್ರತ್ಯೇಕ ಕಲಂಗಳಡಿ ಇವರಿಗೆ ಪ್ರತ್ಯೇಕವಾಗಿ 12 ವರ್ಷ ಜೈಲು, 1.25 ರೂಪಾಯಿ ದಂಡ, 6 ತಿಂಗಳು ಜೈಲು, 10 ಸಾವಿರ ರೂಪಾಯಿ ದಂಡ, 14 ವರ್ಷ ಜೈಲು, 1.45 ಲಕ್ಷ ದಂಡ, 6 ತಿಂಗಳು ಜೈಲು 10 ಸಾವಿರ ರೂಪಾಯಿ ದಂಡ, 12 ವರ್ಷ ಜೈಲು, 1.25 ರೂಪಾಯಿ ದಂಡ, 6 ತಿಂಗಳು ಜೈಲು, 10 ಸಾವಿರ ರೂಪಾಯಿ ದಂಡ, 13 ವರ್ಷ ಜೈಲು, 1.35 ಲಕ್ಷ ರೂಪಾಯಿ ದಂಡ, 6 ತಿಂಗಳು ಜೈಲು, 10 ಸಾವಿರ ರೂಪಾಯಿ ದಂಡ ಹಾಗೂ ಇವರಿಗೆ ಪ್ರತ್ಯೇಕವಾಗಿ 12 ವರ್ಷ ಜೈಲು, 1.25 ರೂಪಾಯಿ ದಂಡ, 6 ತಿಂಗಳು ಜೈಲು, 10 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
2022 ರ ಜೂನ್ 14 ರಂದು, ಮಂಗಳೂರು ಸಿಸಿಬಿ ಪೆÇಲೀಸ್ ಇನ್ಸ್‍ಪೆಕ್ಟರ್ ತಮ್ಮ ತಂಡದೊಂದಿಗೆ ದಾಳಿ ನಡೆಸಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡಲು ಯೋಜಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಅವರ ಬಳಿಯಿಂದ 125 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ, ಸಿಇಎನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಇಎನ್ ಇನ್ಸ್‍ಪೆಕ್ಟರ್ ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಮತಿ ಜುಡಿತ್ ಅವರು ವಾದ ಮಂಡಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿ ಮಂಗಳೂರಿನ ಪಿಡಿಜೆ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ.


















0 comments:
Post a Comment