ಬಂಟ್ವಾಳ, ಡಿಸೆಂಬರ್ 06, 2025 (ಕರಾವಳಿ ಟೈಮ್ಸ್) : ಜಮೀನಿಗೆ ಅಕ್ರಮ ಪ್ರವೇಶಗೈದ ಆರೋಪಿಗಳು ಹಿಟಾಚಿಯಿಂದ ಅಗೆದು ಕೃಷಿ ನಾಶ ಮಾಡಿದ ಘಟನೆ ಪಿಲಾತಬೆಟ್ಟು ಗ್ರಾಮದ ನಿನ್ಯಾರು ಎಂಬಲ್ಲಿ ಶುಕ್ರವಾರ ನಡೆದಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ನಿವಾಸಿ ಶ್ಯಾಮರಾಯ ಆಚಾರಿ (77) ಅವರು ಪಿಲಾತಬೆಟ್ಟು ಗ್ರಾಮದ ನಿನ್ಯಾರು ಎಂಬಲ್ಲಿ ಸರ್ವೆ ನಂಬ್ರ 30/9ರಲ್ಲಿ 35 ಸೆಂಟ್ಸ್, 30/10 ರಲ್ಲಿ 35 ಸೆಂಟ್ಸ್, 116/2 ರಲ್ಲಿ 90ಸೆಂಟ್ಸ್ , 116/2 ರಲ್ಲಿ 3 ಎಕ್ರೆ ಮತ್ತು ಸರ್ವೆ ನಂಬ್ರ 30/4 ರಲ್ಲಿ 29 ಸೆಂಟ್ಸ್ ವರ್ಗ ಜಾಗ ಹೊಂದಿದ್ದು, ಸದ್ರಿ ವರ್ಗ ಜಾಗಕ್ಕೆ ತಾಗಿಕೊಂಡು ಸರ್ವೆ ನಂಬ್ರ 28 ರಲ್ಲಿ 1.50 ಎಕ್ರೆ ಕದಿಂ ಕುಮ್ಕಿ ಜಾಗದಲ್ಲಿ ಸುಮಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವುದಾಗಿದೆ. ಕಳೆದ ಎರಡು ತಿಂಗಳಿನಿಂದ ಆರೋಪಿಗಳು ರಸ್ತೆ ನಿರ್ಮಾಣ ಮಾಡಲು ಪ್ರಯತ್ನಿಸಿರುವ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರಂತೆ ರಸ್ತೆ ನಿರ್ಮಿಸದಂತೆ ಮತ್ತು ಜಮೀನಿಗೆ ಯಾರು ಕೂಡಾ ಅಕ್ರಮ ಪ್ರವೇಶ ಮಾಡದಂತೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಯವರಿಗೂ ಕೂಡಾ ರಸ್ತೆ ನಿರ್ಮಾಣ ಮಾಡದಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಆದರೆ ನ್ಯಾಯಾಲಯದ ಸ್ವಷ್ಟ ಆದೇಶ ಇದ್ದರೂ ಕೂಡಾ ಆರೋಪಿಗಳು ಡಿ 5 ರಂದು ಬೆಳಗ್ಗಿನ ಜಾವ 6 ಗಂಟೆಗೆ ಜಮೀನಿಗೆ ಅಕ್ರಮ ಪ್ರವೇಶ ಮಾಡಿ 2 ಹಿಟಾಚಿಯಿಂದ ಅಗಲು ತೆಗೆದು ಅಡಿಕೆ ಗಿಡಗಳನ್ನು ತುಂಡು ಮಾಡಿ, ಜಾಗದಲ್ಲಿ ಆಳವಡಿಸಿದ ಸಿಸಿ ಕ್ಯಾಮರಾ ದ್ವಂಸಗೊಳಿಸಿ ಸುಮಾರು 1.50 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment