ಬಂಟ್ವಾಳ, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ದೇವಸ್ಥಾನವೊಂದರ ಕಾರ್ಯಕ್ರಮಕ್ಕೆ ಅಳವಡಿಸಿದ ಬ್ಯಾನರ್ ಧರಾಶಾಹಿಯಾಗಿ ಬಿದ್ದುಕೊಂಡಿದ್ದು, ಧಾರ್ಮಿಕ ಕೇಂದ್ರಗಳ ಕಾರ್ಯಕ್ರಮದ ಬ್ಯಾನರುಗಳನ್ನು ಅಳವಡಿಸುವ ಮಂದಿಗೆ ಕಾರ್ಯಕ್ರಮ ಮುಗಿದ ಬಳಿಕ ಅದರ ಗೌರವ ಕಾಪಾಡಿಕೊಂಡು ತೆರವುಗೊಳಿಸುವ ಕನಿಷ್ಠ ಪರಿಜ್ಞಾನವೂ ಇಲ್ಲದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ ಸಿ ರೋಡಿನ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ಈ ಬ್ಯಾನರ್ ಬಿದ್ದುಕೊಂಡಿರುವ ದೃಶ್ಯ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸುವ ಮಂದಿಗಳ ಧಾರ್ಮಿಕ ಕೇಂದ್ರಗಳ ಮೇಲಿನ ಗೌರವ, ಅಭಿಮಾನವನ್ನೆ ಪ್ರಶ್ನಿಸುವಂತಿದೆ. ಅದೂ ಕೂಡಾ ಕಾರ್ಯಕ್ರಮ ಮುಗಿಯುವುದಕ್ಕೆ ಮುಂಚಿತವಾಗಿಯೇ ಈ ರೀತಿ ಧಾರ್ಮಿಕ ಕೇಂದ್ರದ ಬ್ಯಾನರ್ ಅನಾಥವಾಗಿ ಬಿಡುವುದೆಂದರೆ ನೋಡುಗರಿಗೆ ಒಂದು ರೀತಿಯಲ್ಲಿ ಮನನೋಯಿಸುವಂತಿದೆ. ಡಿಸೆಂಬರ್ 30 ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಇದಾಗಿದ್ದು, ಇನ್ನೂ ಕಾರ್ಯಕ್ರಮ ಮುಗಿದಿಲ್ಲ. ಇಲ್ಲಿನ ಇಂದಿರಾ ಕ್ಯಾಂಟೀನಿನ ಮುಂಭಾಗದಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಈ ಬ್ಯಾನರ್ ಅಳವಡಿಸಿರುವ ಸಾಧ್ಯತೆ ಇದ್ದು, ಇಲ್ಲಿನ ಪರವಾನಿಗೆ ರಹಿತ ಬ್ಯಾನರುಗಳನ್ನು ಬಂಟ್ವಾಳ ಪುರಸಭಾಧಿಕಾರಿಗಳು ತೆರವುಗೊಳಿಸಿ ಈ ಬ್ಯಾನರನ್ನು ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ಗೋಡೆಗೆ ಪರಗಿಸಿ ಇಟ್ಟಿದ್ದರು ಎನ್ನಲಾಗಿದ್ದು, ಬಳಿಕ ಇದು ಗಾಳಿಗೆ ಸಂಪೂರ್ಣವಾಗಿ ನೆಲಕ್ಕೆ ಬಿದ್ದುಕೊಂಡಿದೆ.
ಧರ್ಮ, ಧಾರ್ಮಿಕ ಕ್ಷೇತ್ರಗಳ ಮೇಲೆ ವಿಶೇಷ ಕಾಳಜಿ ಇರುವ ತುಳುನಾಡಿನ ಜನರು ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧರ್ಮ, ಧಾರ್ಮಿಕ ಕೇಂದ್ರಗಳ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಯಾವುದೇ ಕಾರಣಕ್ಕೂ ನಿಯಮ ಬಾಹಿರವಾಗಿ ಅಳವಡಿಸುವುದಕ್ಕಾಗಲೀ, ಅವುಗಳ ಗೌರವ, ಪಾವಿತ್ರ್ಯತೆಗೆ ಧಕ್ಕೆಯಾಗುವ ರೀತಿಯ ವರ್ತನೆ ತೋರುವ ಬಗ್ಗೆಯಾಗಲೀ ಸಂಬಂಧಪಟ್ಟ ಧಾರ್ಮಿಕ ಕೇಂದ್ರಗಳ ಆಡಳಿತ ಮಂಡಳಿ ಸ್ಪಷ್ಟ ನಿರ್ಧಾರ ಕೈಗೊಂಡು ಈ ರೀತಿಯಾಗಿ ನಡೆದುಕೊಳ್ಳದಂತೆ ತಾಕೀತು ಮಾಡಬೇಕು ಎಂಬ ಅಭಿಪ್ರಾಯ ನಾಸ್ತಿಕ ವಲಯದಿಂದ ಕೇಳಿ ಬರುತ್ತಿದೆ.















0 comments:
Post a Comment