ವಾಮದಪದವು ಊರಿನ ಬೆಳವಣಿಗೆಯಲ್ಲಿ ರೈಗಳ ಪಾತ್ರ ದೊಡ್ಡದು : ಶ್ರೀಪಾದ ಪಾಂಗಣ್ಣಾಯ - Karavali Times ವಾಮದಪದವು ಊರಿನ ಬೆಳವಣಿಗೆಯಲ್ಲಿ ರೈಗಳ ಪಾತ್ರ ದೊಡ್ಡದು : ಶ್ರೀಪಾದ ಪಾಂಗಣ್ಣಾಯ - Karavali Times

728x90

26 December 2025

ವಾಮದಪದವು ಊರಿನ ಬೆಳವಣಿಗೆಯಲ್ಲಿ ರೈಗಳ ಪಾತ್ರ ದೊಡ್ಡದು : ಶ್ರೀಪಾದ ಪಾಂಗಣ್ಣಾಯ

ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾಮದಪದವು ಶಾಖೆ ಉದ್ಘಾಟನೆ


ಬಂಟ್ವಾಳ, ಡಿಸೆಂಬರ್ 26, 2025 (ಕರಾವಳಿ ಟೈಮ್ಸ್) : ವಾಮದಪದವು ಊರು ಬೆಳೆಯುತ್ತಿರುವ ಊರಾಗಿ ಗುರುತಿಸಿಕೊಳ್ಳಲು ರಮಾನಾಥ ರೈಗಳೇ ಕಾರಣ ಎಂದು ಅಜ್ಜಿಬೆಟ್ಟು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಪಾದ ಪಾಂಗಣ್ಣಾಯ ಹೇಳಿದರು. 

ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ಲೊರೆಟ್ಟೊ ಶಾಖೆ ಸ್ಥಳಾಂತರಗೊಂಡು ವಾಮದಪದವು ಶಾಖೆಯಾಗಿ ಡಿ 26 ರಂದು ಇಲ್ಲಿನ ಬಸ್ತಿಕೋಡಿ ಹರ್ಕಾಡಿ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಕುಗ್ರಾಮವಾಗಿದ್ದ ವಾಮಪದವು ಪ್ರದೇಶ ರಮಾನಾಥ ರೈಗಳ ಬೆಂಬಲದೊಂದಿಗೆ ಇಂದು ಬೆಳೆಯುತ್ತಿರುವ ನಗರವಾಗಿ ಪರಿವರ್ತನೆಗೊಂಡಿದ್ದು, ಇಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸಹಿತ ಹಲವು ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದು, ಇದರ ಫಲ ಇಲ್ಲಿನ ನಾಗರಿಕರು ಸದಾ ಉಣ್ಣುವಂತಾಗಲಿ ಎಂದು ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಜನರ ಆರ್ಥಿಕ ಸ್ವಾವಲಂಬನೆ ಹಾಗೂ ಸ್ಥಳೀಯರಿಗೆ ಸಣ್ಣ ಮಟ್ಟಿನ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಬ್ಯಾಂಕ್ ಶಾಖೆಯನ್ನು ವಾಮಪದವು ಪ್ರದೇಶದಲ್ಲಿ ಉದ್ಘಾಟಿಸಲಾಗಿದೆ. ಎಲ್ಲ ದರ್ಮ ಜಾತಿ ಸಮುದಾಯಕ್ಕೆ ಸೇರಿದವರು ತೊಡಗಿಸಿಕೊಂಡ ಕ್ಷೇತ್ರವಾಗಿರುವ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಕ್ಷೇತ್ರದಿಂದಾಗಿ ಪ್ರದೇಶವಾರು ಅಭಿವೃದ್ದಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. 

ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸಮುದಾಯದ ಹೆಸರಿನಲ್ಲೂ ಸಹಕರಿ ಬ್ಯಾಂಕುಗಳು ಸೃಷ್ಟಿಯಾಗಿ ಆಯಾ ಸಮುದಾಯದ ಏಳಿಗೆಗೂ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಎಂದ ರೈಗಳು ಗ್ರಾಹಕರು ಪ್ರಾಮಾಣಿಕವಾಗಿ ಸಕಾಲದಲ್ಲಿ ಸಾಲ ಮರು ಪಾವತಿಸುವುದರಿಂದ ಸೊಸೈಟಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು.

ಬಂಟ್ವಾಳ ತಾಲೂಕಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರುವ ಮೂಲಕ ಪ್ರತಿ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನಮ್ಮ ಅವಧಿಯಲ್ಲಿ ಆಗಿದ್ದು, ಇದು ಸಾಮಾಜಿಕ ಜೀವನದಲ್ಲಿ ಬಹಳಷ್ಟು ತೃಪ್ತಿ ತಂದಿದೆ ಎಂದರು.

ಚೆನೈತ್ತೋಡಿ ಗ್ರಾ ಪಂ ಅಧ್ಯಕ್ಷೆ ವನಿತಾ ಗಣಕೀಕರಣ, ಉದ್ಯಮಿ ಸೀತಾರಾಮ ಪೈ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್ ಎಚ್ ಎನ್, ನಿರ್ಕಾಣ ಸಂತ ಥೋಮಸರ ದೇವಾಲಯದ ಧರ್ಮಗುರು ಫಾ ಅನಿಲ್ ರೋಶನ್ ಲೋಬೋ, ವಾಮದಪದವು ಬಿಲ್ಲವ ಸಂಘದ ಅಧ್ಯಕ್ಷ ಚೇತನ್ ಪೂಜಾರಿ, ಕಟ್ಟಡದ ಮಾಲಕ ಅಮ್ಮು ರೈ ಹರ್ಕಾಡಿ, ವಾಮದಪದವು ಬಂಟರ ಸಂಘದ ಅಧ್ಯಕ್ಷ

ವಸಂತ ಶೆಟ್ಟಿ, ವಾಮದಪದವು ಕುಲಾಲ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಉದ್ಯಮಿ ಹಂಝ ಬಸ್ತಿಕೋಡಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಮುಖ್ಯ ಅತಿಥಿಗಳಾಗಿದ್ದರು. 

ಇದೇ ವೇಳೆ ಕಟ್ಟಡ ಮಾಲಕ ಅಮ್ಮ ರೈ ಹರ್ಕಾಡಿ ಹಾಗೂ ಇಂಜಿನಿಯರ್ ದಿನೇಶ್ ರೈ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.

ಬ್ಯಾಂಕ್ ಉಪಾಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಬಿ ಎಂ ಅಬ್ಬಾಸ್ ಅಲಿ, ಅಲ್ಪೋನ್ಸ್  ಮಿನೇಜಸ್, ಬಿ ಪದ್ಮಶೇಖರ್ ಜೈನ್, ಕಾಂಚಾಲಾಕ್ಷಿ, ಅಮ್ಮು ಅರ್ಬಿಗುಡ್ಡೆ, ಶಾಖಾ ವ್ಯವಸ್ಥಾಪಕಿ ಕು ಸುಶ್ಮಿತ ಉಪಸ್ಥಿತರಿದ್ದರು. 

ಬ್ಯಾಂಕ್ ನಿರ್ದೇಶಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್ ಪ್ರಸ್ತಾವನೆಗೈದರು. ಸಲಹಾ ಸಮಿತಿ ಸದಸ್ಯ ನವೀನ್ ಚಂದ್ರ ಶೆಟ್ಟಿ ವಂದಿಸಿದರು. ರಂಗಕಲಾವಿದ ಎಚ್ ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ವಾಮದಪದವು ಊರಿನ ಬೆಳವಣಿಗೆಯಲ್ಲಿ ರೈಗಳ ಪಾತ್ರ ದೊಡ್ಡದು : ಶ್ರೀಪಾದ ಪಾಂಗಣ್ಣಾಯ Rating: 5 Reviewed By: karavali Times
Scroll to Top