ಕಡಬ, ಡಿಸೆಂಬರ್ 26, 2025 (ಕರಾವಳಿ ಟೈಮ್ಸ್) : ಬಾರ್ ಕೆಲಸಗಾರನೇ ಲಕ್ಷಾಂತರ ರೂಪಾಯಿ ಮಾಲಕಿಗೆ ವಂಚಿಸಿ ಪರಾರಿಯಾದ ಘಟನೆ ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಡಿ 21 ರಂದು ನಡೆದಿದ್ದು ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಿಳಿನೆಲೆ ನಿವಾಸಿ ವಿಶಾಲ್ ಸ್ಟೀಫನ್ (25) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ತಾಯಿಯು ಕಡಬ, ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಬಾರ್ ಹೊಂದಿದ್ದು, ಸದರಿ ಬಾರ್ ನಲ್ಲಿ ಕಡಬ-ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ ಕೆ ಎಂಬಾತ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆತನೇ ದಿನ ನಿತ್ಯದ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಿರುವುದಾಗಿದೆ. ಡಿ 21 ರಂದು ರಾತ್ರಿ ಬಾರಿನ ವಹಿವಾಟು ಬಗ್ಗೆ ಪರಿಶೀಲನೆ ನಡೆಸಿದಾಗ ವಹಿವಾಟಿನಲ್ಲಿ ವ್ಯತ್ಯಯ ಕಂಡುಬಂದಿದ್ದು, ಈ ಬಗ್ಗೆ ಹರ್ಷಿತ್ ಬಳಿ ವಿಚಾರಿಸಿದಾಗ ಮರುದಿನ ಅಂದರೆ ಡಿ 22 ರಂದು ಸರಿಯಾಗಲಿದೆ ಹಾಗೂ ವ್ಯಾಪಾರದ ನಗದನ್ನು ಮರುದಿನವೇ ಬ್ಯಾಂಕಿನಲ್ಲಿ ಜಮೆ ಮಾಡುವುದಾಗಿ ತಿಳಿಸಿರುತ್ತಾನೆ.
ಆದರೆ ಮರುದಿನ ಹಣ ಜಮೆಯಾಗದಿರುವುದರಿಂದ ಆತನ ಬಳಿ ವಿಚಾರಿಸಲು ಆತ ವಾಸ್ತವ್ಯವಿದ್ದ ಕೊಠಡಿಗೆ ಹೋದಾಗ ಆತ ನಾಪತ್ತೆಯಾಗಿದ್ದನು. ಸಂಶಯಗೊಂಡು ಪರಿಶೀಲಿಸಿದಾಗ ಸ್ಟೋಕ್ ರೂಮಿನಲ್ಲಿದ್ದ ಸುಮಾರು 6,57,104/- ಮೌಲ್ಯದ ಮಧ್ಯವನ್ನು ಈ ಮೊದಲೇ ಆರೋಪಿಯು ಮಾರಾಟ ಮಾಡಿ, ಆ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿರುವುದು ಡಿ 21 ರಂದು ವ್ಯಾಪಾರದ ನಗದನ್ನು ಕಳವು ಮಾಡಿ ಪರಾರಿಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



















0 comments:
Post a Comment