ಬಂಟ್ವಾಳ, ಡಿಸೆಂಬರ್ 22, 2025 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಸುಭಾಷ್ ನಗರ ಬೇಂಕ್ಯ ಜಂಕ್ಷನ್ ಬಳಿ ವಿಧ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ರಸ್ತೆ ದಾಟುವಾಗ ವಾಹನಗಳ ವೇಗದ ಮಿತಿ ನಿಯಂತ್ರಿಸಲು ರಸ್ತೆಗೆ ಬ್ಯಾರಿಕೇಡರ್ ಅಳವಡಿಕೆ ಅಗತ್ಯ ಎಂಬ ಅಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಉದ್ಯಮಿ ಕರೀಂ ಬಾಳಿಕೆ ಟಿ ಆರ್ ಅವರು ಬ್ಯಾರಿಕೇಡ್ ಕೊಡುಗೆಯಾಗಿ ನೀಡಿದ್ದು, ಅದರ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣಾ ಪಿಎಸ್ಸೈ ಸಂಜೀವ ಕೆ ಅವರು ಉದ್ಘಾಟಿಸಿದರು. ಈ ಸಂದರ್ಭ ಬಂಟ್ವಾಳ ನಗರ ಪೆÇಲೀಸ್ ಠಾಣಾ ಪಿಎಸ್ಸೈ ದುಗ್ಗಪ್ಪ, ಸಜಿಪಮೂಡ ಗ್ರಾ ಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ (ಶೋಭಿತ್) ಪೂಂಜಾ ಬರಂಗರೆ, ಬೇಂಕ್ಯ ಆಟೊ ಪಾರ್ಕ್ ಅಧ್ಯಕ್ಷ ಶರೀಪ್ ಆಲಾಡಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಪೆರ್ವ, ಉಪಾಧ್ಯಕ್ಷ ದಿವ್ಯಾನಂದ ಅನ್ನಪ್ಪಾಡಿ, ಯೋಜನೆ ಉಸ್ತುವಾರಿ ಪ್ರವೀಣ್ ಕರಂದಾಡಿ, ಪಾರ್ಕ್ ಉಸ್ತುವಾರಿ ಮುಸ್ತಫಾ ಆಲಾಡಿ, ಕಮಿಟಿ ಪದಾಧಿಕಾರಿಗಳು, ಬೇಂಕ್ಯ ಆಟೊ ಪಾರ್ಕ್ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್, ಮಾಜಿ ಉಪಾಧ್ಯಕ್ಷ ಮನ್ಸೂರ್ ತನ್ನಚ್ಚಿಲ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಬ್ಯಾರಿಕೇಡ್ ಕೊಡುಗೆ ನೀಡಿದ ಉದ್ಯಮಿ ಕರೀಂ ಟಿ ಆರ್ ಅವರನ್ನು ಅಟೋ ಪಾರ್ಕ್ ವತಿಯಿಂದ ಸನ್ಮಾನಿಸಲಾಯಿತು.
















0 comments:
Post a Comment