ಬಂಟ್ವಾಳ, ಡಿಸೆಂಬರ್ 09, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಗ್ರಾಮದ ಮೆಲ್ಕಾರಿನಲ್ಲಿ ರಿಟ್ಝ್ ಕಾರು ರಸ್ತೆ ಡಿವೈಡರಿಗೆ ತಾಗಿ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ ಡಿ 6 ರಂದು ಸಂಭವಿಸಿದೆ.
ಗಾಯಗೊಂಡ ಕಾರು ಚಾಲಕನನ್ನು ಸತೀಶ್ ರಾವ್ ಹಾಗೂ ಪ್ರಯಾಣಿಕಳಾಗಿದ್ದ ವೇದವಲ್ಲಿ ಎಂದು ಹೆಸರಿಸಲಾಗಿದೆ. ಡಿ 6 ರಂದು ಅಪರಾಹ್ನ 3.30 ರ ವೇಳೆಗೆ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ರಿಟ್ಜ್ ಕಾರಿನಲ್ಲಿ ಸತೀಶ ರಾವ್ ಚಾಲಕರಾಗಿ ವೇದವಲ್ಲಿ, ಉದಯ ಕುಮಾರ ಹಾಗೂ 8 ವರ್ಷದ ಮಗು ಶ್ರೇಯಸ್ ಅವರು ಸಂಚರಿಸುತ್ತಿರುವ ವೇಳೆ ಕಾರು ಚಾಲಕನ ನಿಯಂತ್ರಣ ಮೀರಿ ಹೆದ್ದಾರಿ ಡಿವೈಡರಿಗೆ ತಾಗಿ ಚಾಲಕ ಸತೀಶ ರಾವ್ ಹಾಗೂ ಪ್ರಯಾಣಿಕಳು ವೇದವಲ್ಲಿ ಅವರ ಕಾಲಿಗೆ, ಭುಜಕ್ಕೆ, ಕುತ್ತಿಗೆಗೆ ಗಾಯಗಳಾಗಿದೆ. ಅವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ವತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ವತ್ರೆಗೆ ಸಾಗಿಸಲಾಗಿದೆ. ಉದಯ ಕುಮಾರ ಹಾಗೂ ಮಗು ಶ್ರೇಯಸ್ ಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment