ಮಂಗಳೂರು, ಡಿಸೆಂಬರ್ 21, 2025 (ಕರಾವಳಿ ಟೈಮ್ಸ್) : ಸಂಚಾರ ದಂಡವನ್ನು ನೇರವಾಗಿ ವೆಬ್‍ಸೈಟ್‍ನಲ್ಲಿ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಪಾವತಿಸಲಾಗುತ್ತದೆ ಹೊರತು ಈ ದಂಡ ಪಾವತಿಗೆ ಪೊಲೀಸ್ ಇಲಾಖೆಯಲ್ಲಿ ಇತರ ಯಾವುದೇ ಅಪ್ಲಿಕೇಶನ್ ಇರುವುದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕೆಲವು ವಂಚಕರು ಎಪಿಕೆ ಫೈಲ್ ಗಳನ್ನು ಸೃಷ್ಟಿಸಿ ಸಂಚಾರ ದಂಡವನ್ನು ಪಾವತಿಸಲು ಕೇಳುವ ಅನುಮಾನಾಸ್ಪದ ವ್ಯಕ್ತಿಗಳಿಗೆ ಲಿಂಕ್‍ಗಳನ್ನು ಕಳುಹಿಸುತ್ತಿದ್ದಾರೆ. ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿದ ತಕ್ಷಣ ಫೆÇೀನ್ ಹ್ಯಾಕ್ ಆಗುತ್ತದೆ ಹಾಗೂ ಎಲ್ಲಾ ವಿವರಗಳನ್ನು ವಂಚಕರಿಗೆ ನೀಡುತ್ತದೆ ಮತ್ತು ಅವರು ಆ ಮೂಲಕ ಬ್ಯಾಂಕಿನಿಂದ ಎಲ್ಲಾ ಮೊತ್ತವನ್ನು ದೂರದಿಂದಲೇ ವರ್ಗಾಯಿಸಿಕೊಳ್ಳುತ್ತಾರೆ.
ಸಂಚಾರ ದಂಡವನ್ನು ನೇರವಾಗಿ ವೆಬ್ ಸೈಟ್‍ನಲ್ಲಿ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಪಾವತಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಯಾವುದೇ ಅಪ್ಲಿಕೇಶನ್ ಇರುವುದಿಲ್ಲ. ಯಾರಾದರೂ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಬೇಕಾದರೆ, ಅದನ್ನು ಪ್ಲೇಸ್ಟೋರ್ ನಿಂದ ಪರಿಶೀಲಿಸಬೇಕು ಮತ್ತು ಅದನ್ನು ಯಾವುದೇ ನೇರ ಫೈಲ್‍ಗಳ ಮೂಲಕ ಮಾಡಬಾರದು. ಇಂತಹ ವಂಚಕರ ಬಲೆಗೆ ಈಗಾಗಲೇ ಬಿದ್ದು ಹಣ ಕಳೆದುಕೊಂಡಿರುವ ಬಗ್ಗೆ ತಿಳಿದು ಬಂದಿದೆ ಎಂದಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಕೋರಿದ್ದಾರೆ.














0 comments:
Post a Comment