ಪ್ರತಿಭಟನೆ ವೇಳೆ ಪೊಲೀಸರ ವಿರುದ್ದ ಆರೋಪಕ್ಕೆ ಕಮಿನಷರ್ ದಾಖಲೆ ಸಹಿತ ಸ್ಪಷ್ಟನೆ : ಜನರ ಮನಸ್ಸನ್ನು ಕೋಮುವಾದೀಕರಣಗೊಳಿಸದಂತೆ ತಾಕೀತು - Karavali Times ಪ್ರತಿಭಟನೆ ವೇಳೆ ಪೊಲೀಸರ ವಿರುದ್ದ ಆರೋಪಕ್ಕೆ ಕಮಿನಷರ್ ದಾಖಲೆ ಸಹಿತ ಸ್ಪಷ್ಟನೆ : ಜನರ ಮನಸ್ಸನ್ನು ಕೋಮುವಾದೀಕರಣಗೊಳಿಸದಂತೆ ತಾಕೀತು - Karavali Times

728x90

20 December 2025

ಪ್ರತಿಭಟನೆ ವೇಳೆ ಪೊಲೀಸರ ವಿರುದ್ದ ಆರೋಪಕ್ಕೆ ಕಮಿನಷರ್ ದಾಖಲೆ ಸಹಿತ ಸ್ಪಷ್ಟನೆ : ಜನರ ಮನಸ್ಸನ್ನು ಕೋಮುವಾದೀಕರಣಗೊಳಿಸದಂತೆ ತಾಕೀತು

ಮಂಗಳೂರು, ಡಿಸೆಂಬರ್ 21, 2025 (ಕರಾವಳಿ ಟೈಮ್ಸ್) : ಎಸ್ ಡಿ ಪಿ ಐ ಮಂಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಜಾತಿ-ಧರ್ಮಗಳ ಆಧಾರದಲ್ಲಿ ಪೊಲೀಸರ ವಿರುದ್ದ ಮಾಡಿರುವ ಆರೋಪಗಳ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಸ್ಪಷ್ಟನೆ ನೀಡುವುದರ ಜೊತೆಗೆ ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಜನರು ಕೋಮು ಆಧಾರದಲ್ಲಿ ವಿಭಜಿಸುವವರ ಬಗ್ಗೆ ಜಾಗರೂಕರಾಗಿರುವಂತೆ ಎಚ್ಚರಿಸಿದ್ದಾರೆ. 

ಎಸ್‍ಡಿಪಿಐ ಪ್ರತಿಭಟನೆ ವೇಳೆ ಪೊಲೀಸರು ಎಸ್‍ಡಿಪಿಐ ಜನರನ್ನು ಮಾತ್ರ ಬಂಧಿಸುತ್ತಿದ್ದು, ಎಷ್ಟು ಸಂಘ ಪರಿವಾರದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪ್ರಶ್ನಿಸಿದ್ದರಲ್ಲದೆ ಈ ಬಗ್ಗೆ ಅಂಕಿ ಅಂಶಗಳನ್ನು ಆರ್ ಟಿ ಐ ಮೂಲಕ ಪಡೆದು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದರು. 

ಈ ಬಗ್ಗೆ ಪ್ರತಿಕ್ರಯಿಸಿದ ಕಮಿಷನರ್ ಈ ವಿಷಯದಲ್ಲಿ ಸಂಬಂಧಪಟ್ಟವರು ಬಯಸಿದರೆ ನಾನು ಈ ಬಗ್ಗೆ ಎಲ್ಲ ಅಂಕಿ ಅಂಶಗಳನ್ನು ನಿಮ್ಮೊಂದಿಗೆ ನೇರವಾಗಿ ಹಂಚಿಕೊಳ್ಳಲು ಬಯಸುತ್ತೇನೆ. ಆರ್ ಟಿ ಐ ಮೊರೆ ಹೋಗಿ  ಕೇಳುವ ಅಗತ್ಯವಿಲ್ಲ. ಇದಕ್ಕಾಗಿ 30 ದಿನಗಳನ್ನು ವ್ಯರ್ಥ ಮಾಡುವ ಅಗತ್ಯವೂ ಇಲ್ಲ, ಕೇಳಿದ ತಕ್ಷಣ ಅದನ್ನು ಒದಗಿಸಬಹುದು. ಇದರಲ್ಲಿ ಮರೆಮಾಚುವಂತದ್ದೇನೂ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಪಶುವಿನ ಹೆಸರಿನಲ್ಲಿ ಸತ್ಯಗಳನ್ನು ಮರೆಮಾಡುವ ಚಾತುರ್ಯದ ಅಭಿವ್ಯಕ್ತಿಯ ಮೂಲಕ ಮುಗ್ಧ ಜನರನ್ನು ಪ್ರಚೋದಿಸುವುದು ಸಾಮಾನ್ಯವಾಗಿದೆ ಎಂದಿರುವ ಕಮಿಷನರ್ ಪೊಲೀಸರು ಸಮುದಾಯಗಳ ಆಧಾರದ ಮೇಲೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ. ಬದಲಾಗಿ ವಾಸ್ತವಾಂಶಗಳ ಆಧಾರದ ಮೇಲೆ ಕಾರ್ಯನಿರ್ವಹಣೆ ಇರಲಿದೆ. ಶಾಂತಿ ಭಂಗಕ್ಕೆ ಕಾರಣವಾಗುವ ಅಥವಾ ಯಾವುದೇ ರೀತಿಯ ಅಪರಾಧದಲ್ಲಿ ಭಾಗಿಯಾಗಬಹುದಾದವರನ್ನು ಬಂಧಿಸುವ ಹಕ್ಕು ಪೆÇಲೀಸರಿದೆ ಮತ್ತು ಭವಿಷ್ಯದಲ್ಲಿಯೂ ಪೆÇಲೀಸರು ಖಂಡಿತವಾಗಿಯೂ ಅದನ್ನು ಮುಂದುವರಿಸುತ್ತಾರೆ. ಬಾಂಡ್ ಷರತ್ತುಗಳನ್ನು ಉಲ್ಲಂಘಿಸಿದ ಮತ್ತು ಅಪರಾಧಗಳಲ್ಲಿ ಭಾಗಿಯಾಗಿರುವ ಜನರ ಬಗ್ಗೆ ಸ್ಪಷ್ಟವಾಗಿ ತೋರಿಸಲಾಗಿದೆ. ಬಾಂಡ್‍ಗಳಲ್ಲಿ ಹೆಚ್ಚಿನವು ಮುಟ್ಟುಗೋಲು ಹಾಕಿಕೊಳ್ಳಲ್ಪಟ್ಟಿವೆ ಮತ್ತು ಇನ್ನೂ ಕೆಲವು ಪ್ರಕರಣಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆಗಳು ನಡೆಯುತ್ತಿವೆ. ಸೂಕ್ಷ್ಮ ಸಂದರ್ಭಗಳಲ್ಲಿ ಅಂದರೆ ಶಾಂತಿ ವಿರೋಧಿ ಹಾಗೂ ದ್ವೇಷ ಭಾಷಣ ನಿರೀಕ್ಷೆ ಇದ್ದೆಡೆ ನಾವು ಎರಡೂ ಕಡೆಯಿಂದಲೂ ಬಂಧನ ನಡೆಸಿದ್ದೇವೆ. 

ಕೆಲವೇ ವಿಷಯಗಳನ್ನು ಮಾತನಾಡಿ ಅನುಕೂಲಕ್ಕೆ ತಕ್ಕಂತೆ ಉಳಿದ ಸಂಗತಿಗಳನ್ನು ಮರೆಮಾಡುವ ಮೂಲಕ ಮುಗ್ಧ ಸಾರ್ವಜನಿಕರ ಮನಸ್ಸನ್ನು ಕೋಮುವಾದಿಗೊಳಿಸುವ ಬದಲು, ಸತ್ಯಗಳನ್ನು ಕ್ರಮಬದ್ದವಾಗಿ ನೀಡಬೇಕು ಎಂದು ಕಮಿಷನರ್ ತಿಳಿಸಿದ್ದಾರೆ. ಅಪರಾಧದಲ್ಲಿ ಪೊಲೀಸ್ ಕ್ರಮಗಳನ್ನು ಸಮತೋಲನಗೊಳಿಸುವುದು ಪೆÇಲೀಸರ ಕೈಯಲ್ಲಿಲ್ಲ. ಅದು ಆ ಸಮುದಾಯದ ಜನರ ಕೈಯಲ್ಲಿದೆ. ಅವರು ಯಾವುದೇ ಅಪರಾಧಗಳನ್ನು ಮಾಡದಿದ್ದರೆ, ಅವರ ಅಂಕಿ ಅಂಶಗಳು ಕಡಿಮೆಯಾಗುತ್ತವೆ. ಅವರು ಹೆಚ್ಚು ಅಪರಾಧಗಳನ್ನು ಮಾಡಿದರೆ, ಅದು ಹೆಚ್ಚಾಗಿರುತ್ತದೆ. ಅದೇ ರೀತಿ ಪೆÇಲೀಸ್ ಕ್ರಮವೂ ಸಹ ಜರುಗಲಿದೆ ಎಂದು ಕಮಿಷನರ್ ರೆಡ್ಡಿ ಎಚ್ಚರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪ್ರತಿಭಟನೆ ವೇಳೆ ಪೊಲೀಸರ ವಿರುದ್ದ ಆರೋಪಕ್ಕೆ ಕಮಿನಷರ್ ದಾಖಲೆ ಸಹಿತ ಸ್ಪಷ್ಟನೆ : ಜನರ ಮನಸ್ಸನ್ನು ಕೋಮುವಾದೀಕರಣಗೊಳಿಸದಂತೆ ತಾಕೀತು Rating: 5 Reviewed By: karavali Times
Scroll to Top