ಬಂಟ್ವಾಳ, ಡಿಸೆಂಬರ್ 29, 2025 (ಕರಾವಳಿ ಟೈಮ್ಸ್) : ಜಲ್ಲಿ ಕಲ್ಲು ವ್ಯಾಪಾರಿಗೆ ಬಾರಿನಲ್ಲಿದ್ದ ತಂಡವೊಂದು ಜೀವಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಿಯಾರು ನಿವಾಸಿ ಧನುಷ್ (24) ಎಂಬವರೇ ಜೀವಬೆದರಿಕೆಗೆ ಒಳಗಾದವರು. ಇವರು ತಾಯಿ ತಂಗಿ ಜೊತೆ ವಾಸವಾಗಿದ್ದು, ಜಲ್ಲಿ ಕಲ್ಲಿನ ವ್ಯಾಪಾರ ಮಾಡಿಕೊಂಡಿರುತ್ತಾರೆ. ಡಿ 27 ರಂದು ರಾತ್ರಿ 8.0 ರ ವೇಳೆಗೆ ಸಜಿಪಮೂಡ ಗ್ರಾಮದ ಕಂದೂರಿನಲ್ಲಿರುವ ಸುರಭಿ ಬಾರಿಗೆ ಹೋಗಿದ್ದು, ಅಲ್ಲಿಗೆ ಬಂದ ರಾಜೇಶ್ ಪಾಣೆಮಂಗಳೂರು ಎಂಬಾತ ಬಾರಿನಿಂದ ಹೊರಗೆ ಬಂದಾಗ ನೀನು ತಿಂಗಳಿಗೆ ನನಗೆ 50 ಸಾವಿರ ರೂಪಾಯಿ ಕೊಡಬೇಕು ಇಲ್ಲದ್ದಿದಲ್ಲಿ ಈಗಿನ ಎಸ್ಪಿ ವರ್ಗಾವಣೆಯಾದ ಕೂಡಲೇ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ. ಬಳಿಕ ಅಲ್ಲಿಂದ ಧನುಷ್ ಬಿ ಸಿ ರೋಡಿನ ಸನ್ಮಾನ್ ಬಾರಿಗೆ ಬಂದಿರುತ್ತಾರೆ. ಸನ್ಮಾನ್ ಬಾರಿನಲ್ಲಿದ್ದ ಧನುಷ್ ಅವರ ಸ್ನೇಹಿತರಾದ ಶಿವು, ಅಭಿಜಿತ್, ಶಶಾಂಕ್, ಭುವಿತ್ ಅವರು ಬಾರಿನಿಂದ ರಾತ್ರಿ 11 ಗಂಟೆ ವೇಳೆಗೆ ಹೊರಗೆ ಬಂದಾಗ ರಾಜೇಶ್, ರಾಕೇಶ್ , ಗೌತಮ್ ಅವರು ಬಾರಿನಿಂದ ಹೊರಗೆ ಬಂದಿದ್ದು, ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದ ರಾಜೇಶ್ ಬಿಯರ್ ಬಾಟಲಿಯನ್ನು ಧನುಷ್ ಮೇಲೆ ಎಸೆದಿದ್ದಾನೆ. ಅದು ಅವರ ಎಡ ಭುಜಕ್ಕೆ ತಾಗಿರುತ್ತದೆ. ರಾಕೇಶ್ ಆತನ ಕೈಯಲ್ಲಿದ್ದ ಬಾಟಲಿಯನ್ನು ರಸ್ತೆಗೆ ಎಸೆದಿರುತ್ತಾನೆ. ಆಗ ಧನುಷ್ ಹೆದರಿ ಓಡಿದ್ದು, ಗೌತಮ್ ಎಂಬಾತ ಧನುಷ್ ಅವರನ್ನು ಓಡಿಸಿಕೊಂಡು ಹೋಗಿರುತ್ತಾನೆ. ಧನುಷ್ ಪೆÇಲೀಸ್ ಠಾಣೆಗೆ ಬರುವುದನ್ನು ನೋಡಿ ಆರೋಪಿಗಳು ಅವರು ಬಂದಿದ್ದ ದ್ವಿಚಕ್ರ ವಾಹನದಲ್ಲಿ ಹೋಗಿರುತ್ತಾರೆ. ಈ ಧನುಷ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment