ಬೆಳ್ತಂಗಡಿ, ಡಿಸೆಂಬರ್ 19, 2025 (ಕರಾವಳಿ ಟೈಮ್ಸ್) : ತಾಲೂಕಿನ ಜ್ಯುವೆಲ್ಲರಿ ಅಂಗಡಿ ಹಿಂಭಾಗಕ್ಕೆ ಬಹಿರ್ದೆಸೆಗೆಂದು ತೆರಳಿದ್ದ ಅಪ್ರಾಪ್ತ ಪ್ರಾಯದ ಮೂವರು ಬಾಲಕರಿಗೆ ಜ್ಯುವೆಲ್ಲರಿ ಸಿಬ್ಬಂದಿಗಳು ಹಲ್ಲೆ ನಡೆಸಿದ ಘಟನೆ ಡಿ 15 ರಂದು ಸಂಭವಿಸಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಅಪ್ರಾಪ್ತ ಪ್ರಾಯದ ಮೂರು ಮಂದಿ ಬಾಲಕರು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಜುವೆಲ್ಲರಿ ಒಂದರ ಹಿಂಬಾಗಕ್ಕೆ ಬಹಿರ್ದೆಸೆಗೆ ಹೋದಾಗ, ಸದ್ರಿ ಜುವೆಲ್ಲರ್ಸ್ ಸಿಬ್ಬಂದಿ ಅಲ್ಲಿಗೆ ಬಂದು, ಬಾಲಕರನ್ನು ತಡೆದು ನಿಲ್ಲಿಸಿ, ಅವರುಗಳು ವಿಡಿಯೋ ಮಾಡುತ್ತಿರುವುದಾಗಿ ತಕರಾರು ತೆಗೆದು, ಮೂವರಿಗೂ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2025, ಕಲಂ 126(2) 115(1) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸದ್ರಿ ಘಟನೆಯ ಬಗ್ಗೆ ಜುವೆಲ್ಲರಿಯ ಸಿಬ್ಬಂದಿ ಕೂಡಾ ಬಾಲಕರ ವಿರುದ್ಧ ಡಿ 17 ರಂದು ದೂರರ್ಜಿ ನೀಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.














0 comments:
Post a Comment