ಪುತ್ತೂರು : ಭಕ್ತಕೋಡಿ ಜಂಕ್ಷನ್ನಿನಲ್ಲಿ ರಸ್ತೆಗೆ ಹೊಂದಿಕೊಂಡು ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟೆ ತೆರವುಗೊಳಿಸಿದ ಅಧಿಕಾರಿಗಳು - Karavali Times ಪುತ್ತೂರು : ಭಕ್ತಕೋಡಿ ಜಂಕ್ಷನ್ನಿನಲ್ಲಿ ರಸ್ತೆಗೆ ಹೊಂದಿಕೊಂಡು ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟೆ ತೆರವುಗೊಳಿಸಿದ ಅಧಿಕಾರಿಗಳು - Karavali Times

728x90

18 December 2025

ಪುತ್ತೂರು : ಭಕ್ತಕೋಡಿ ಜಂಕ್ಷನ್ನಿನಲ್ಲಿ ರಸ್ತೆಗೆ ಹೊಂದಿಕೊಂಡು ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟೆ ತೆರವುಗೊಳಿಸಿದ ಅಧಿಕಾರಿಗಳು

ಪುತ್ತೂರು, ಡಿಸೆಂಬರ್ 19, 2025 (ಕರಾವಳಿ ಟೈಮ್ಸ್) : ತಾಲೂಕಿನ ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ನಿನಲ್ಲಿ ರಸ್ತೆಗೆ ಹೊಂದಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟೆಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. 

ಭಕ್ತಕೋಡಿ ಜಂಕ್ಷನ್ ಎಂಬಲ್ಲಿ ಈ ಹಿಂದೆ 2017 ರ ಸೆಪ್ಟಂಬರ್ ತಿಂಗಳಿನಲ್ಲಿ, ಸಾರ್ವಜನಿಕ ರಸ್ತೆಗೆ ಹೊಂದಿಕೊಂಡು ಅನಧಿಕೃತ ತ್ರಿಕೋನಾಕಾರದ ಕಟ್ಟೆ ನಿರ್ಮಾಣ ಮಾಡಲಾಗಿರುತ್ತದೆ. ಆಗ  2017ರಲ್ಲಿ ಸಾರ್ವಜನಿಕರ ಮಧ್ಯೆ ಅನಧಿಕೃತ ಕಟ್ಟೆ ನಿರ್ಮಾಣದ ವಿಚಾರಕ್ಕೆ ಮಾತಿನ ಚಕಮಕಿ ಉಂಟಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಪಂಚಾಯತ್ ಅಧಿಕಾರಿಗಳು ಮತ್ತು ಪೆÇಲೀಸ್ ಅಧಿಕಾರಿಗಳು, ಸದ್ರಿ ಸ್ಥಳದಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ, ಅನಧಿಕೃತ ಕಟ್ಟೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿರುತ್ತಾರೆ. 

ಆದರೆ ಸದ್ರಿ ಕಟ್ಟೆಯನ್ನು ತೆರವುಗೊಳಿಸದೇ ಪ್ರಸ್ತುತ ಯಾರೋ ಆರೋಪಿತರು ಅದೇ ಅನಧಿಕೃತ ಕಟ್ಟೆಯಲ್ಲಿ ಕಂಬವನ್ನು ನೆಟ್ಟು, ಸದ್ರಿ ಕಂಬಕ್ಕೆ ಧಾರ್ಮಿಕ ಧ್ವಜವನ್ನು ಅಳವಡಿಸಿರುವ ಈ ಬಗ್ಗೆ ಡಿಸೆಂಬರ್ 16 ರಂದು ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಹಿಂದೆ (2017ರಲ್ಲಿ) ಗೊಂದಲವುಂಟಾಗಿದ್ದ ರಸ್ತೆ ಬದಿಯಲ್ಲಿ ಕಟ್ಟೆ ನಿರ್ಮಾಣ ಮಾಡಿರುವುದಲ್ಲದೇ, ಪ್ರಸ್ತುತ ಸದ್ರಿ ಕಟ್ಟೆಗೆ ಮರದ ಕಂಬವನ್ನು ನೆಟ್ಟು ಅದಕ್ಕೆ ಧ್ವಜವನ್ನು ಅಳವಡಿಸಲಾಗಿದೆ. ಈ ಅನಧಿಕೃತ ಕೃತ್ಯದಿಂದ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಸಾರ್ವಜನಿಕ ನೆಮ್ಮದಿಗೆ ಹಾಗೂ ಕಾನೂನು ಸುವ್ಯವಸ್ಥೆಗೆ  ಧಕ್ಕೆಯಾಗುವಂತಹ ಘಟನೆಗಳು ನಡೆಯುವ ಸಾಧ್ಯತೆಗಳಿರುವುದು ಕಂಡುಬಂದಿರುವುದರಿಂದ ಡಿ 17 ರಂದು ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಿದ್ದಾರೆ. 

ಯಾವುದೇ ಅಧಿಕೃತ ಪರವಾನಿಗೆ ರಹಿತ ಅನಧಿಕೃತವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಸಂಭವವಿರುವಂತೆ, ಕಟ್ಟೆ ನಿರ್ಮಾಣ ಮಾಡಿದವರ ವಿರುದ್ಧ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 147-2025, ಕಲಂ 270 ಬಿ ಎನ್ ಎಸ್-2023 ಮತ್ತು ಕಲಂ 3  1951 ಮತ್ತು 1981 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

2017ರಲ್ಲಿ ಚುನಾವಣಾ ಪೂರ್ವದಲ್ಲಿ ಸದ್ರಿ ಅನಧಿಕೃತ ಕಟ್ಟೆ ನಿರ್ಮಾಣದ ಕಾರ್ಯ ನಡೆದಿದ್ದು, ಆ ಬಳಿಕ ಸದ್ರಿ ಕಟ್ಟೆಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಚಟುವಟಿಕೆಗಳು ನಡೆದಿರುವುದಿಲ್ಲ. ಪ್ರಸ್ತುತ ರಾಜಕೀಯ ಉದ್ದೇಶಗಳಿಂದ ಚುಟುವಟಿಕೆಗಳು ನಡೆಯುತ್ತಿರುವುದಾಗಿ ಆರೋಪಗಳು ಬಂದಿದ್ದು, ಈ ಬಗ್ಗೆ ಕೂಡಾ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಭಕ್ತಕೋಡಿ ಜಂಕ್ಷನ್ನಿನಲ್ಲಿ ರಸ್ತೆಗೆ ಹೊಂದಿಕೊಂಡು ನಿರ್ಮಾಣಗೊಂಡಿದ್ದ ಅನಧಿಕೃತ ಕಟ್ಟೆ ತೆರವುಗೊಳಿಸಿದ ಅಧಿಕಾರಿಗಳು Rating: 5 Reviewed By: karavali Times
Scroll to Top