ಡಿಸೆಂಬರ್ 22 ರಂದು ಸರ್ವಧರ್ಮಗಳ ಭಾವೈಕ್ಯತೆಯ ಕ್ರಿಸ್ಮಸ್ ಆಚರಣೆ : ಪೂರ್ವಭಾವಿ ಸಭೆ - Karavali Times ಡಿಸೆಂಬರ್ 22 ರಂದು ಸರ್ವಧರ್ಮಗಳ ಭಾವೈಕ್ಯತೆಯ ಕ್ರಿಸ್ಮಸ್ ಆಚರಣೆ : ಪೂರ್ವಭಾವಿ ಸಭೆ - Karavali Times

728x90

7 December 2025

ಡಿಸೆಂಬರ್ 22 ರಂದು ಸರ್ವಧರ್ಮಗಳ ಭಾವೈಕ್ಯತೆಯ ಕ್ರಿಸ್ಮಸ್ ಆಚರಣೆ : ಪೂರ್ವಭಾವಿ ಸಭೆ

ಮಂಗಳೂರು, ಡಿಸೆಂಬರ್ 07, 2025 (ಕರಾವಳಿ ಟೈಮ್ಸ್) : ಎಂಎಲ್ಸಿ ಐವನ್ ಡಿಸೋಜ ನೇತೃತ್ವದಲ್ಲಿ ಡಿಸೆಂಬರ್ 22 ರಂದು ನಡೆಯುವ 11ನೇ ವರ್ಷದ ಸರ್ವ ಧರ್ಮಗಳ ಭಾವೈಕ್ಯತೆಯ ಸಂಗಮವಾದ ಕ್ರಿಸ್ಮಸ್ ಸಂಭ್ರಮಾಚರಣೆ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. 

ಕಳೆದ 10 ವರ್ಷಗಳಿಂದ ಕ್ರಿಸ್ಮಸ್, ದೀಪಾವಳಿ, ರಂಜಾನ್ ಹಬ್ಬಗಳನ್ನು ಅಚರಿಸುತ್ತಾ ಬಂದಿದ್ದು, ಸಮಾಜದ ಎಲ್ಲಾ ವರ್ಗಗಳ ಜನರಿಂದ ಬಹು ಪ್ರಶಂಸೆ ವ್ಯಕ್ತವಾಗಿದೆ.  ಮೂರೂ ಧರ್ಮದ ಹಬ್ಬಗಳನ್ನು ಅಚರಿಸುವ ಮೂಲಕ ಸರ್ವ ಧರ್ಮಗಳ ಏಕತೆಯ ಭಾವೈಕ್ಯತೆ ಸಂಕೇತ ಅಗಬೇಕೆಂಬ ಆಶಾವಾದ ಹೊಂದಲಾಗಿದೆ. ಸರ್ವ ಧರ್ಮ ಕ್ರಿಸ್ಮಸ್ ಹಬ್ಬವನ್ನು ಡಿ 22 ರಂದು ಸೋಮವಾರ ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ಜೆಪ್ಪು ಸೈಂಟ್ ಅಂಥೋನಿ ಆಶ್ರಮದ ತೆರೆದ ಮೈದಾನದಲ್ಲಿ ನಡೆಸಲಾಗುವುದು ಎಂದ ಐವನ್ ಡಿಸೋಜ ಈ ಹಬ್ಬದ ಸಲುವಾಗಿ ಕ್ಯಾರಲ್ ಹಾಡುಗಳ ಸ್ಪರ್ದೆ ಮತ್ತು ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧಪಟ್ಟ ವಿವಿಧ ವಿನೋದಾವಳಿಗಳು ನಡೆಯಲಿದ್ದು, ವಿಜೇತರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನಗಳನ್ನು ನೀಡಲು ತೀರ್ಮಾನಿಸಲಾಗಿದೆ. ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಹಭೋಜನವನ್ನು ಏರ್ಪಡಿಸಲಾಗಿದೆ. ಭಾವೈಕ್ಯತೆಯ ಸಂಗಮವಾದ ಕ್ರಿಸ್ಮಸ್ ಸಂಭ್ರಮಾಚರಣೆ ಪ್ರಯುಕ್ತ ಆಶ್ರಮದ ಎಲ್ಲಾ ನಿವಾಸಿಗಳೊಂದಿಗೆ ಸಹಭೋಜನವನ್ನು ಏರ್ಪಡಿಸಲಾಗಿದೆ. 

ಸಭೆಯಲ್ಲಿ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಕಾರ್ಯಕ್ರಮ ಸಂಚಾಲಕ ನಾಗೇಂದ್ರ ಕುಮಾರ್ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಬ್ರಿಷ್ಟನ್ ರೋಡ್ರಿಗಸ್ ಪೂರ್ವ ತಯಾರಿ ಬಗ್ಗೆ ಸಭೆಗೆ ವಿವರಿಸಿದರು. 

ಈ ಸಂದರ್ಭ ಪ್ರಮುಖರಾದ ಜೆ. ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಕು ಅಪ್ಪಿಲತಾ, ವಿಕಾಸ್ ಶೆಟ್ಟಿ, ಪಿಯೂಸ್ ಮೊಂತೆರೋ, ಸೇಸಮಕ್ಕ, ಸತೀಶ್ ಪೆಂಗಲ್, ವಿಜಯ್ ಅರಾನ್ಹ, ಟಿ.ಸಿ. ಗಣೇಶ್, ಜೇಮ್ಸ್ ಪ್ರವೀಣ್, ರಿತೇಶ್ ಶಕ್ತಿನಗರ, ಅನಂದ್ ಸೋನ್ಸ್ ಇಮ್ರಾನ್, ನೀತು ಡಿಸೋಜಾ, ಆಲ್ ಸ್ಟೀನ್ ಡಿಕುನ್ಹ, ಡಿಂಪಲ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಡಿಸೆಂಬರ್ 22 ರಂದು ಸರ್ವಧರ್ಮಗಳ ಭಾವೈಕ್ಯತೆಯ ಕ್ರಿಸ್ಮಸ್ ಆಚರಣೆ : ಪೂರ್ವಭಾವಿ ಸಭೆ Rating: 5 Reviewed By: karavali Times
Scroll to Top