ಬೆಳಗಾವಿ, ಡಿಸೆಂಬರ್ 09, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲ್ಯಾಟರೈಟ್ ಇಟ್ಟಿಗೆ (ಕೆಂಪು ಕಲ್ಲು) ತೆಗೆಯಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994 ರ ನಿಯಮ-3ಎ(ಎ) ರಂತೆ 74 ಕಾರ್ಯಾದೇಶಗಳನ್ನು ಮತ್ತು ನಿಯಮ-32 ರಂತೆ 21 ಲೈಸೆನ್ಸ್ ಗಳನ್ನು ಮಂಜೂರು ಮಾಡಲಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುತ್ತದೆ ಹಾಗೂ ಕೆಂಪು ಕಲ್ಲು ತೆಗೆಯಲು ಕರ್ನಾಟಕ ಉಪಖನಿಜ ರಿಯಾಯತಿ ನಿಯಮಗಳು 1994ರ ನಿಯಮ-3ಎ(ಎ) ರಂತೆ ಕಾರ್ಯಾದೇಶ ಕೋರಿ 55 ಅರ್ಜಿಗಳು ಮತ್ತು ನಿಯಮ-32 ರಂತೆ ಲೈಸನ್ಸ್ ಗಳನ್ನು ಮಂಜೂರಾತಿ ಕೋರಿ 8 ಅರ್ಜಿಗಳು ಬಾಕಿ ಇರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು ಹೇಳಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಕಲಾಪದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಅವರ ದ.ಕ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೆಂಪು ಕಲ್ಲು ಕಡಿಯುವ ಪರವಾನಿಗೆ ನೀಡಲಾಗಿದೆ. ಪರವಾನಿಗೆ ನೀಡಲು ಬಾಕಿ ಇರುವ ಅರ್ಜಿಗಳು ಎಷ್ಟು ಮತ್ತು ಜಿಲ್ಲೆಯಲ್ಲಿ ಕೆಂಪು ಕಲ್ಲು ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವರು ಜಿಲ್ಲಾ ಟಾಸ್ಕ್ ಪೆÇೀರ್ಸ್ (ಗಣಿ) ಸಮಿತಿಯಿಂದ ಚಾಲಿತದಳ ರಚಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಾಣಿಕೆ ಮಾಡುತ್ತಿರುವ ವಿರುದ್ದ ಎಂ.ಎಂ.ಡಿ.ಆರ್.1957 ಕಾಯ್ದೆ ಹಾಗೂ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994ರ ನಿಯಮದಂತೆ ಪರಿಶೀಲಿಸಿ ದಂಡ ವಿಧಿಸಿಲಾಗುವುದು ಮತ್ತು ಮೊಕದ್ದಮೆಗಳನ್ನು ದಾಖಲಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯಲ್ಲಿ ಕೆಂಪು ಕಲ್ಲು ಕಡಿಯಲು ಯಾವುದೇ ಪರವಾನಿಗೆ ನೀಡಿರುವುದಿಲ್ಲ. ಕೆಂಪು ಕಲ್ಲಿಗೆ (ಲ್ಯಾಟರೈಟ್ ಬ್ರಿಕ್ಸ್) ವಿಧಿಸುತ್ತಿದ್ದ ಶುಲ್ಕಗಳನ್ನು ಕಡಿಮೆ ಮಾಡಿ ಆಧಿಸೂಚನೆಯನ್ನು ಸೆಪ್ಟೆಂಬರ್ 17 ರಂದು ಹೊರಡಿಸಲಾಗಿರುತ್ತದೆ ಸಚಿವರು ಉತ್ತರಿಸಿದ್ದಾರೆ.














0 comments:
Post a Comment