ಮಂಗಳೂರು, ಡಿಸೆಂಬರ್ 29, 2025 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2025ನೇ ಸಾಲಿನಲ್ಲಿ ವಿತರಿಸಿರುವ ಭಿನ್ನ ಚೇತನರ ಬಸ್ ಪಾಸುಗಳನ್ನು ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಭಿನ್ನಚೇತನರ ಪಾಸುದಾರರ ನವೀಕರಣ/ ಹೊಸ ಪಾಸು ಪಡೆಯುವ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಾಗ ಭಿನ್ನಚೇತನರು ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಸೈಝ್ ಫೋಟೋ, ಹಾಗೂ ಯು.ಡಿ.ಐ.ಡಿ/ ಗುರುತಿನ ಚೀಟಿಯನ್ನು ಆನ್ ಲೈನ್ ಮೂಲಕ ಅಪ್ ಲೋಡ್ ಮಾಡಿ, ಆಯಾ ತಾಲೂಕಿನ ಘಟಕಗಳಲ್ಲಿ ಪಾಸುಗಳನ್ನು ನವೀಕರಿಸಿ ಪಡೆಯಬಹುದು.
ಹೊಸದಾಗಿ ಪಾಸ್ ಪಡೆಯುವವರು ಪುತ್ತೂರು ವಿಭಾಗೀಯ ಕಛೇರಿಯಲ್ಲಿ ಪಡೆಯಬೇಕು. ಪಾಸು ಪಡೆಯುವ ಸಮಯದಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿ, ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಯು.ಡಿ.ಐ.ಡಿ/ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಮತ್ತು ಮೂಲ ಪ್ರತಿ, 2 ಪಾಸ್ ಪೋರ್ಟ್ ಗಾತ್ರದ ಫೋಟೋ, 1 ಅಂಚೆ ಚೀಟಿ ಗಾತ್ರದ ಫೋಟೋ ಹಾಗೂ ಯು.ಡಿ.ಐ.ಡಿ/ ಗುರುತಿನ ಚೀಟಿಯ ಮಾನ್ಯತಾ ಅವಧಿ ಪರಿಶೀಲನೆಗೆ ಹಾಜರುಪಡಿಸಬೇಕು. 680/- ರೂಪಾಯಿ ಶುಲ್ಕ ಪಾವತಿಸಿ ಪಾಸನ್ನು ಪಡೆದುಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















0 comments:
Post a Comment