ಮಂಗಳೂರು, ಡಿಸೆಂಬರ್ 29, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮೂಡಬಿದ್ರೆ ತಾಲೂಕು ಹಾಗೂ ತಾಲೂಕು ಕೃಷಿಕ ಸಮಾಜ ರೈತ ಜನ್ಯ ಫಾರ್ಮರ್ ಪೆÇ್ರೀಡ್ಯೂಸರ್ ಕಂಪೆನಿ ಅಲಂಗಾರು ಹಾಗೂ ಕೃಷಿ ವಿಚಾರ ವಿನಿಮಯ ಕೇಂದ್ರ, ಮೂಡಬಿದ್ರೆ ಇವುಗಳ ಸಂಯುಕ್ತ ಸಹಭಾಗಿತ್ವದಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಡಿಸೆಂಬರ್ 31 ರಂದು ಬೆಳಿಗ್ಗೆ 10:30 ಗಂಟೆಗೆ ಮೂಡಬಿದ್ರೆಯಲ್ಲಿ ಸಮಾಜ ಮಂದಿರ ಸಭಾಭವನದಲ್ಲಿ ಆಚರಿಸಲಾಗುತ್ತದೆ.
ಈ ಪ್ರಯುಕ್ತ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.


















0 comments:
Post a Comment