ಕರಾವಳಿ ಉತ್ಸವದ ಲೋಗೋ ತಯಾರಿಕೆ ಸ್ಪರ್ಧೆ : ಡಿಸೆಂಬರ್ 17 ಕೊನೆ ದಿನ - Karavali Times ಕರಾವಳಿ ಉತ್ಸವದ ಲೋಗೋ ತಯಾರಿಕೆ ಸ್ಪರ್ಧೆ : ಡಿಸೆಂಬರ್ 17 ಕೊನೆ ದಿನ - Karavali Times

728x90

10 December 2025

ಕರಾವಳಿ ಉತ್ಸವದ ಲೋಗೋ ತಯಾರಿಕೆ ಸ್ಪರ್ಧೆ : ಡಿಸೆಂಬರ್ 17 ಕೊನೆ ದಿನ

ಮಂಗಳೂರು, ಡಿಸೆಂಬರ್ 10, 2025 (ಕರಾವಳಿ ಟೈಮ್ಸ್) : 2025-26ನೇ ಸಾಲಿನ ಕರಾವಳಿ ಉತ್ಸವ ಕಾರ್ಯಕ್ರಮವು ಡಿಸೆಂಬರ್ 20ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಕರಾವಳಿ ಉತ್ಸವದ ಲೋಗೋ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕರಾವಳಿಯ ಕಲೆ, ಸಂಸ್ಕøತಿ ಮತ್ತು ಪ್ರವಾಸೋದ್ಯಮ ಇವುಗಳ ಸಮ್ಮಿಲನದ ಲೋಗೋವನ್ನು ತಯಾರಿಸಿ  ಡಿಸೆಂಬರ್ 17ರೊಳಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ (ದೂರವಾಣಿ 08242453926/ 906313259) ಅಥವಾ ಇ-ಮೇಲ್ adtourismmangalore@gmail.com ಗೆ ಸಲ್ಲಿಸಬಹುದು. 

ಅತ್ಯುತ್ತಮವಾಗಿ ಲೋಗೋ ತಯಾರಿಸಿದ ಅಭ್ಯರ್ಥಿಗಳಿಗೆ 50 ರೂಪಾಯಿ ನಗದು ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿ ಉತ್ಸವದ ಲೋಗೋ ತಯಾರಿಕೆ ಸ್ಪರ್ಧೆ : ಡಿಸೆಂಬರ್ 17 ಕೊನೆ ದಿನ Rating: 5 Reviewed By: karavali Times
Scroll to Top