ರಾಜ್ಯದಲ್ಲಿ ಭೂಪರಿವರ್ತನೆ ನಿಯಮಗಳ ಸರಳೀಕರಣಕ್ಕೆ ಕಾಯ್ದೆ ತಿದ್ದುಪಡಿ : ಸಚಿವ ಕೃಷ್ಣ ಬೈರೇಗೌಡ - Karavali Times ರಾಜ್ಯದಲ್ಲಿ ಭೂಪರಿವರ್ತನೆ ನಿಯಮಗಳ ಸರಳೀಕರಣಕ್ಕೆ ಕಾಯ್ದೆ ತಿದ್ದುಪಡಿ : ಸಚಿವ ಕೃಷ್ಣ ಬೈರೇಗೌಡ - Karavali Times

728x90

10 December 2025

ರಾಜ್ಯದಲ್ಲಿ ಭೂಪರಿವರ್ತನೆ ನಿಯಮಗಳ ಸರಳೀಕರಣಕ್ಕೆ ಕಾಯ್ದೆ ತಿದ್ದುಪಡಿ : ಸಚಿವ ಕೃಷ್ಣ ಬೈರೇಗೌಡ

 ಬೆಳಗಾವಿ, ಡಿಸೆಂಬರ್ 10, 2025 (ಕರಾವಳಿ ಟೈಮ್ಸ್) :  ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 95ರ ವಿವಿಧ ಉಪ-ಕಲಂಗಳಿಗೆ ತಿದ್ದುಪಡಿಯನ್ನು ಮಾಡಲಾಗಿದೆ. ಅದನ್ನು ಜಾರಿಗೆ ತರಲು ಈಗಾಗಲೇ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ಹಾಗೂ ಸಲಹೆಯನ್ನು ಪಡೆದು ಸೂಕ್ತ ನಿಯಮಗಳನ್ನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ರಾಮೋಜಿ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಲು ಕ್ರಮವಹಿಸಲಾಗುತ್ತಿರುವುದರಿಂದ ಜನತೆಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ ಎಂದರು. 

ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 95ಕ್ಕೆ ಮಾಡಲಾದ ತಿದ್ದುಪಡಿಗಳಿಗೆ ಅನುಗುಣವಾಗಿ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ವಿವಿಧ ನಿಯಮಗಳಿಗೆ ತಿದ್ದುಪಡಿ ಮಾಡಲು ಸರ್ಕಾರವು ದಿನಾಂಕ 17.09.2025 ರಂದು ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದ್ದು, ಶೀಘ್ರದಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದ ಸಚಿವ ಕೃಷ್ಣ ಬೈರೇಗೌಡ, ಸಣ್ಣ ಕೈಗಾರಿಕೆಗಳಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ 2 ಎಕ್ರೆ ವರೆಗೆ  ಭೂಪರಿವರ್ತನೆಯ ಅವಶ್ಯಕತೆ ಇಲ್ಲದೆ ನೇರವಾಗಿ ಪ್ಲಾನ್ ಅಪೆÇ್ರೀವ್ ಮಾಡಿಸಿಕೊಳ್ಳಬಹುದಾಗಿದೆ ಹಾಗೂ ರಿನೀವಲ್ ಎನರ್ಜಿ ಯೋಜನೆ ಗಳಿಗೆ ಕನ್ವರ್ಶನ್ ಅಗತ್ಯವಿಲ್ಲ ಮತ್ತು ರೆವಿನ್ಯು  ಕೋರ್ಟ್ ನಡೆಸುವ ಕುರಿತಂತೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಭೂಪರಿವರ್ತನೆ ನಿಯಮಗಳ ಸರಳೀಕರಣಕ್ಕೆ ಕಾಯ್ದೆ ತಿದ್ದುಪಡಿ : ಸಚಿವ ಕೃಷ್ಣ ಬೈರೇಗೌಡ Rating: 5 Reviewed By: karavali Times
Scroll to Top