ಮಂಗಳೂರು, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಅಕ್ಟೋಬರ್ 27 ರಂದು ದಾಖಲಾಗಿದ್ದ ನಿಷೇಧಿತ ಲಕ್ಕಿ ಸ್ಕೀಂ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.
ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 99/2025 ರಂತೆ ಪುತ್ತೂರು ನಗರ ಪೊಲೀಸ್ ಠಾಣಾ ಪಿಎಸ್ಸೈ ಜನಾರ್ಧನ ಕೆ ಎಂ ಅವರು ಅಕ್ಟೋಬರ್ 27 ರಂದು ಸಂಜೆ 4.30 ರ ವೇಳೆಗೆ ಠಾಣಾ ವ್ಯಾಪ್ತಿಯ ಪುತ್ತೂರು ಪೇಟೆ, ಕೊರ್ಟ್ ರಸ್ತೆ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸದ್ರಿ ಸ್ಥಳಗಳಲ್ಲಿ ಸಾರ್ವಜನಿಕರು ಗುಂಪಾಗಿ ಸೇರಿ ಕರ ಪತ್ರಗಳನ್ನು ನೋಡಿಕೊಂಡು ಬಹುಮಾನಗಳ ಲಕ್ಕಿ ಚಿಟ್ ಫಂಡ್ ಬಗ್ಗೆ ಮಾತನಾಡಿಕೊಂಡಿದ್ದು ವಿಶನ್ ಇಂಡಿಯಾ 15ನೇ ಮಾಸಿಕ ಬಂಪರ್ ಡ್ರಾ 1 ಲಕ್ಷ ಕ್ಯಾಶ್ ವಿನ್ನರ್ ಎಂಬ ಲಕ್ಕಿ ಸ್ಕೀಮಿನಲ್ಲಿ ಒಂದು ಬಾರಿ 23 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಕಾರು, ಚಿನ್ನಾಭರಣಗಳು, ನಗದು, ಮೊಬೈಲ್, ಫ್ರಿಜ್, ಗೃಹೋಪಯೋಗಿ ಇತ್ಯಾದಿ ವಸ್ತುಗಳನ್ನು ನೀಡುತ್ತಾರೆ ಎಂಬುದಾಗಿ ಚರ್ಚಿಸುತ್ತಿರುವುದನ್ನು ಗಮನಿಸಿ ಸದ್ರಿ ಕರ ಪತ್ರವನ್ನು ತೆಗೆದುಕೊಂಡು ನೋಡಿದಾಗ ಇದರಲ್ಲಿ ಕಛೇರಿ ವಿಳಾಸ ಇಲ್ಲದೇ ಇದ್ದು ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಸದ್ರಿ ಲಕ್ಕೀ ಡ್ರಾದ ಬಗ್ಗೆ ಮಂಗಳೂರಿನ ಸಲಾಂ ಮತ್ತು ಅಜೀಜ್ ಎಂಬುವರು ವಿಶನ್ ಇಂಡಿಯಾ 15ನೇ ಮಾಸಿಕ ಬಂಪರ್ ಡ್ರಾ 1 ಲಕ್ಷ ಕ್ಯಾಶ್ ವಿನ್ನರ್ ನಲ್ಲಿ ತಿಂಗಳಲ್ಲಿ ಲಕ್ಕೀ ಸ್ಕೀಮಿನಲ್ಲಿ ಡ್ರಾ ಆದ ಸದಸ್ಯರುಗಳಿಗೆ ಸೊತ್ತುಗಳನ್ನು ನೀಡಲು ಪುತ್ತೂರಿನ ಲ್ಯಾಖ್ ಕ್ಯಾಶ್ ವಿನ್ನರ್ ನಲ್ಲಿ ತಿಂಗಳಲ್ಲಿ ಲಕ್ಕೀ ಸ್ಕೀಮಿನಲ್ಲಿ ಡ್ರಾ ಆದ ಸದಸ್ಯರುಗಳಿಗೆ ಸೊತ್ತುಗಳನ್ನು ನೀಡಲು ಪುತ್ತೂರಿನ ಮಾರುಕಟ್ಟೆ ರಸ್ತೆಯಲ್ಲಿ ಒಂದು ಅಂಗಡಿ ಕೋಣೆಯನ್ನು ಬಾಡಿಗೆಗೆ ಪಡೆದಿರುವ ವಿಷಯ ತಿಳಿದು ಬಂದಿರುತ್ತದೆ. ಆರೋಪಿತರು ಸೇರಿ ಈ ನಿಷೇದಿತ ಸ್ಕೀಮನ್ನು ಅಕ್ರಮವಾಗಿ ನಡೆಸುತ್ತಿರುವುದರಿಂದ ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಈ ಮೇಲ್ಕಂಡ ವಿಶನ್ ಇಂಡಿಯಾ 15ನೇ ಮಾಸಿಕ ಬಂಪರ್ ಡ್ರಾ 1 ಲಕ್ಷ ಕ್ಯಾಶ್ ವಿನ್ನರ್ ಎಂಬ ನಿಷೇದಿತ ಲಕ್ಕೀ ಸ್ಕೀಮನ್ನು ಅಕ್ರಮವಾಗಿ ನಡೆಸುತ್ತಿರುವ ಮಂಗಳೂರಿನ ಸಲಾಂ ಮತ್ತು ಅಜೀಜ್ ಎಂಬುವರ ಸಂಸ್ಥೆಯ ನಿರ್ದೇಶರುಗಳ ವಿರುಧ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷೀರು ಸ್ಥಳವು ವಿಷನ್ ಇಂಡಿಯಾ, ಮಿಡ್ ಲ್ಯಾಂಡ್ ಬಿಲ್ಡಿಂಗ್, ಮಾಯಾ ಬಾರ್ ಹತ್ತಿರ ತೊಕ್ಕೊಟ್ಟು ಮಂಗಳೂರು ಆಗಿರುವುದರಿಂದ ಮೊಕದ್ದಮೆ ಸಂಖ್ಯೆ 99/2025ನ್ನು ಉಳ್ಳಾಲ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿರುವುದನ್ನು ಸ್ವೀಕರಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.














0 comments:
Post a Comment