ಬಂಟ್ವಾಳ, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ನೆಲ್ಲಿಗುಡ್ಡೆ ನೂರುಲ್ ಹುದಾ ಮದರಸ ಮತ್ತು ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಪಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಎನ್ ಕೆ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಕಮಿಟಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರಾಗಿ ಕುಂಞÂಮೋನು, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ಎಸ್ ಐ ಹಾಗೂ ಹಂಝತ್ ವಿ ಎಸ್ ಕೋಶಾಧಿಕಾರಿಯಾಗಿ ಝಬೈರ್ ಪೆರ್ಲಂಪಾಡಿ, ಲೆಕ್ಕ ಪರಿಶೋಧಕರಾಗಿ ಮುಶ್ತಾಕ್ ಬೇಗ್ ಎನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶಬ್ಬೀರ್ ನೆಕ್ಕಿಲಾರು, ಮುಹಮ್ಮದ್ ನೆಕ್ಕರೆಕಾಡು, ಇಬ್ರಾಹಿಂ ಕೊಪ್ಪಳ, ಹಂಝ ಸೆರ್ಕಳ, ಅಬ್ದುಲ್ ಖಾದರ್ ಎಂ ಎನ್, ಅಬ್ದುಲ್ ರಝಾಕ್ ಎನ್ ಕೆ, ಅಬ್ದುಲ್ ರಹಿಮಾನ್ ಕೊಪ್ಪಳ ಹಾಗೂ ರಫೀಕ್ ಶಾಲಾ ಬಳಿ, ಮದ್ರಸ ಪ್ರಧಾನ ಉಸ್ತುವಾರಿಯಾಗಿ ಮುಹಮ್ಮದ್ ನೆಕ್ಕರೆಕಾಡು, ಉಸ್ತುವಾರಿಯಾಗಿ ಅಬ್ದುಲ್ ರಝಾಕ್ ಎನ್ ಕೆ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.














0 comments:
Post a Comment