ಬೆಳ್ತಂಗಡಿ, ಡಿಸೆಂಬರ್ 19, 2025 (ಕರಾವಳಿ ಟೈಮ್ಸ್) : ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಗೆ ಗಡೀಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿದ್ದಾರೆ.
ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಅರ್ಜಿ ಸಲ್ಲಿಸಿದ್ದು, ಅದರಂತೆ ಪುತ್ತೂರು ಸಹಾಯಕ ಆಯುಕ್ತರು ಮತ್ತು ಉಪವಿಭಾಗೀಯ ದಂಡಾಧಿಕಾರಿಯವರು ದಿನಾಂಕ ಸೆಪ್ಟೆಂಬರ್ 17 ರಂದು ಕರ್ನಾಟಕ ಪೆÇಲೀಸ್ ಕಾಯ್ದೆ-1963 ಕಲಂ 55(ಎ) ಮತ್ತು (ಬಿ) ರಂತೆ ಗಡಿಪಾರು ಆದೇಶ ಹೊರಡಿಸಿರುತ್ತಾರೆ. ಸದ್ರಿ ಆದೇಶಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂಖ್ಯೆ 30021/2025 ರಂತೆ ಸದ್ರಿ ಆದೇಶವನ್ನು ಕೆ.ಪಿ ಆಕ್ಟ್ ನ ಯಾವ ಕಲಂ ಅಡಿಯಲ್ಲಿ ಆದೇಶವನ್ನು ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಕಾರಣ ಸಹಿತ ಮತ್ತೊಂದು ಆದೇಶ ಮಾಡಲು ಸೂಚಿಸಿದೆ. ಸದ್ರಿ ಆದೇಶವನ್ನು ರಿಟ್ ಪಿಟಿಷನ್ ಆದೇಶದ ಪ್ರತಿಯನ್ನು ಸ್ವೀಕರಿಸಿದ 15 ದಿನದೊಳಗಾಗಿ ಮಾಡುವಂತೆ ಸೂಚಿಸಿರುತ್ತಾರೆ.
ಅದರಂತೆ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಡಿಸೆಂಬರ್ 16 ರಿಂದ ಮುಂದಿನ ಸೆಪ್ಟೆಂಬರ್ 16ರವರೆಗೆ ರಾಯಚೂರು ಜಿಲ್ಲೆಯ ಮಾನ್ವಿ ಪೆÇಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಲು ಆದೇಶ ಹೊರಡಿಸಿರುತ್ತಾರೆ. ಸದ್ರಿ ಆದೇಶವನ್ನು ಜಾರಿ ಮಾಡಲು ಬೆಳ್ತಂಗಡಿ ಪೆÇಲೀಸ್ ಇನ್ಸ್ ಪೆಕ್ಟರ್ ಅವರು ಮಹೇಶ ಶೆಟ್ಟಿ ತಿಮರೋಡಿಯ ಮನೆಗೆ ತೆರಳಿದ್ದು, ಮನೆಯಲ್ಲಿ ಹಾಜರಿಲ್ಲದೇ ಇದ್ದುದರಿಂದ ಸದ್ರಿಯವರನ್ನು ಕೆ.ಪಿ ಆಕ್ಟ್ ಅನ್ವಯ ತಲೆ ಮರೆಸಿಕೊಂಡಿರುವ ವ್ಯಕ್ತಿಯ ಪ್ರಕ್ರಿಯೆ ಪ್ರಕಾರ ಗಡಿಪಾರು ಆದೇಶವನ್ನು ಸದ್ರಿಯವರ ಮನೆಯ ಗೋಡೆಗೆ ಅಂಟಿಸಿ ಮತ್ತು ಉಜಿರೆ ಪರಿಸರದಲ್ಲಿ ಸಾರ್ವಜನಿಕವಾಗಿ ಪ್ರಚಾರ ಜಾರಿ ಮಾಡಲು ಸಹಾಯಕ ಆಯುಕ್ತರ ಅನುಮತಿಯನ್ನು ಪಡೆದು, ಗಡಿಪಾರು ಆದೇಶವನ್ನು ಸದ್ರಿಯವರ ಮನೆಗೆ ಅಂಟಿಸಿ ಮತ್ತು ಸಾರ್ವಜನಿಕವಾಗಿ ಪ್ರಚಾರ ಮಾಡಿ ಜಾರಿ ಮಾಡಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ.














0 comments:
Post a Comment