ಬಂಟ್ವಾಳ, ಡಿಸೆಂಬರ್ 22, 2025 (ಕರಾವಳಿ ಟೈಮ್ಸ್) : ಸ್ವೀಟ್ಸ್ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಡಬ್ಬದಲ್ಲಿಟ್ಟಿದ್ದ 70 ಸಾವಿರ ರೂಪಾಯಿ ಹಣವನ್ನು ಕಳ್ಳತನ ಮಾಡಿದ ಘಟನೆ ಮಂಚಿ ಗ್ರಾಮದ ಕುಕ್ಕಾಜೆ ಜಂಕ್ಷನ್ನಿನಲ್ಲಿ ಡಿ 21 ರಂದು ಬೆಳಕಿಗೆ ಬಂದಿದೆ.
ರಾಜಸ್ಥಾನ ರಾಜ್ಯದ ಪಾಳಿ ಜಿಲ್ಲೆಯ ಜೆತ್ ಪುರ್ ಗ್ರಾಮದ ನಿವಾಸಿ ಹಮೀರ್ ರಾಮ್ (54) ಎಂಬವರಿಗೆ ಸೇರಿದ ಕುಕ್ಕಾಜೆ ಗ್ರಾಮದ ಕುಕ್ಕಾಜೆ ಜಂಕ್ಷನ್ ಬಳಿ ಲೀವಿಸ್ ಕಾಂಪ್ಲೆಕ್ಸಿನಲ್ಲಿರುವ ಕುಕ್ಕಾಜೆ ಸ್ವೀಟ್ಸ್ ಬೇಕರಿ ಅಂಗಡಿಗೆ ಡಿ 20 ರಂದು ರಾತ್ರಿಯಿಂದ ಡಿ 21 ರ ಬೆಳಗ್ಗಿನ ಅವಧಿಯಲ್ಲಿ ಹಿಂದಿನಿಂದ ಬಂದು ಹಿಂದಿನ ಗೋಡೆಯ ಮೇಲಿನ ಕಿಂಡಿಯ ಕಬ್ಬಿಣದ ಬಲೆಯನ್ನು ಹರಿದು ಹಾಕಿ ಒಳ ಪ್ರವೇಶಿಸಿದ ಕಳ್ಳರು ಡಬ್ಬದಲ್ಲಿಟ್ಟಿದ್ದ 70 ಸಾವಿರ ರೂಪಾಯಿ ಹಣವನ್ನು ಕಳವುಗೈದಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
22 December 2025
- Blogger Comments
- Facebook Comments
Subscribe to:
Post Comments (Atom)














0 comments:
Post a Comment