ಬಂಟ್ವಾಳ, ಡಿಸೆಂಬರ್ 22, 2025 (ಕರಾವಳಿ ಟೈಮ್ಸ್) : ಇಡ್ಕಿದು ಗ್ರಾಮದ ಅಳಕೆಮಜಲು ಎಂಬಲ್ಲಿ ಓಮ್ನಿ ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರೆ ಗಾಯಗೊಂಡ ಘಟನೆ ಡಿ 20 ರಂದು ಸಂಜೆ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರೆಯನ್ನು ಲಾವಣ್ಯ ಎಂದು ಹೆಸರಿಸಲಾಗಿದೆ. ಇವರು ತಮ್ಮ ಸ್ಕೂಟರಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಪುತ್ತೂರಿಗೆ ತೆರಳಿ ಕೆಲಸ ಮುಗಿಸಿ ವಾಪಾಸು ವಿಟ್ಲ ಕಡೆಗೆ ಬರುತ್ತಿದ್ದ ವೇಳೆ ಅಳಕೆಮಜಲು ಎಂಬಲ್ಲಿ ಮುಹಮ್ಮದ್ ರಶೀದ್ ಎಂಬವರು ಚಲಾಯಿಸಿಕೊಂಡು ಬಂದ ಓಮ್ನಿ ಕಾರು ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಲಾವಣ್ಯ ಅವರಿಗೆ ಗಾಯಗಳಾಗಿದ್ದು, ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment