ಬಂಟ್ವಾಳ, ಡಿಸೆಂಬರ್ 26, 2025 (ಕರಾವಳಿ ಟೈಮ್ಸ್) : ನೇರಳಕಟ್ಟೆ ಜನಪ್ರಿಯಾ ಗಾರ್ಡನ್ ಮದುವೆ ಸಭಾಂಗಣದಲ್ಲಿ ಗುರುವಾರ ರಾತ್ರಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಉಂಟಾಗಿ ಅಂಬ್ಯುಲೆನ್ಸ್ ತುರ್ತು ವಾಹನ ಸಹಿತ ಸಾರ್ವಜನಿಕರು ಟ್ರಾಫಿಕ್ ಕಿರಿ ಕಿರಿ ಅನುಭವಿಸಿದ್ದು ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ವಿಟ್ಲ ಠಾಣಾ ಪೆÇಲೀಸರು ಶುಕ್ರವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸದ್ರಿ ಹಾಲ್ ಆವರಣದಲ್ಲಿ ಸಭಾಂಗಣದ ಸಾಮರ್ಥ್ಯಕ್ಕೆ ತಕ್ಕುದಾದ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದ್ರಿ ಕಟ್ಟಡಕ್ಕೆ ನೀಡಲಾಗಿರುವ ಪರವಾನಿಗೆ ಮರು ಪರಿಶೀಲಿಸುವಂತೆ ಸಂಬಂಧಪಟ್ಟ ಪಿಡಿಒ ಅವರಿಗೆ ಪೊಲೀಸ್ ಇಲಾಖೆ ಕೋರಿ ಪತ್ರ ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
26 December 2025
- Blogger Comments
- Facebook Comments
Subscribe to:
Post Comments (Atom)




















0 comments:
Post a Comment