ಬಂಟ್ವಾಳ, ಡಿಸೆಂಬರ್ 08, 2025 (ಕರಾವಳಿ ಟೈಮ್ಸ್) : ಅಲ್ಯುಮಿನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಸಮೀಪದ ಹೈಟೆನ್ಶನ್ ಲೈನ್ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತಪಟ್ಟ ಘಟನೆ ಕರೋಪಾಡಿ ಗ್ರಾಮದ ಪದ್ಯಾನ ಗಡಿಭಾಗ ಎಂಬಲ್ಲಿ ಡಿ 7 ರಂದು ಬೆಳಿಗ್ಗೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ನಾರಾಯಣ ನಾಯ್ಕ್ ಎಂದು ಹೆಸರಿಸಲಾಗಿದೆ. ಇವರು ಡಿ 7 ರಂದು ಬೆಳಿಗ್ಗೆ 8.30ರ ವೇಳೆಗೆ ಮನೆಯ ಎದುರುಗಡೆಯ ತೆಂಗಿನ ಮರದಿಂದ ಅಲ್ಯುಮಿನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಕೊಕ್ಕೆ ಆಕಸ್ಮಿಕವಾಗಿ ಪಕ್ಕದಲ್ಲಿರುವ ಎಚ್ ಟಿ ಲೈನ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಇವರನ್ನು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment