ಬಂಟ್ವಾಳ, ಡಿಸೆಂಬರ್ 02, 2025 (ಕರಾವಳಿ ಟೈಮ್ಸ್) : ಯಾವುದೋ ಕಾಯಿಲೆ ಉಲ್ಬಣಿಸಿ ಪಶ್ಚಿಮ ಬಂಗಾಳ ಮೂಲಕ ಕಾರ್ಮಿಕ ವ್ಯಕ್ತಿಯೋರ್ವ ಮಲಗಿದಲ್ಲೇ ಮೃತಪಟ್ಟ ಘಟನೆ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬಲ್ಲಿ ಡಿ 1 ರಂದು ಮುಂಜಾನೆ ವೇಳೆ ಸಂಭವಿಸಿದೆ.
ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ ಎಂ ಡಿ ಸಾಬೀರ್ (36) ಎಂದು ಹೆಸರಿಸಲಾಗಿದೆ. ಇವರು ವೆಸ್ಟ್ ಬೆಂಗಾಲದಿಂದ ಕೂಲಿ ಕೆಲಸಕ್ಕಾಗಿ ಬಂದವರು ನ 30 ರಂದು ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಜಗನ್ನಾಥ ಶೆಟ್ಟಿ ಅವರ ಹೊಸ ಮನೆಗೆ ಕೆಲಸಕ್ಕೆ ಬಂದವರು ಅಲ್ಲಿಯೇ ತಂಗಿದ್ದು, ರಾತ್ರಿ ಊಟ ಮಾಡಿ ರೂಮಿನಲ್ಲಿ ಮಲಗಿದ್ದರು. ಡಿ 1 ರಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಎಂ ಡಿ ಸಾಬೀರ್ ಅವರು ನರಳಾಡಿದ್ದಾರೆ. ಅವರನ್ನು ಜೊತೆಯಲ್ಲಿದ್ದವರು ತಟ್ಟಿ ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದನ್ನು ಕಂಡು 108 ಆಂಬುಲೆನ್ಸ್ ಮೂಲಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಯಾವುದೋ ಖಾಯಿಲೆ ಉಲ್ಬಣಿಸಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಇವರು ವಿಪರೀತ ಧೂಮಪಾನ ಸೇವನೆ ಮಾಡುತ್ತಿದ್ದು ಇವರಿಗೆ ಉಬ್ಬಸ ಹಾಗೂ ನೆವಸ ಮತ್ತು ದಮ್ಮು ಕೆಮ್ಮಿನ ಸಮಸ್ಯೆ ಇದ್ದು ಇದೇ ಖಾಯಿಲೆಯಿಂದ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮರಣ ಹೊಂದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ಬಾದ್ ಷಾ ಖಾನ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment