ಗೂಡಿನಬಳಿ : ಅಟೋ ರಿಕ್ಷಾ ಮಗುಚಿ ಪ್ರಯಾಣಿಕ ಆಸ್ಪತ್ರೆಗೆ - Karavali Times ಗೂಡಿನಬಳಿ : ಅಟೋ ರಿಕ್ಷಾ ಮಗುಚಿ ಪ್ರಯಾಣಿಕ ಆಸ್ಪತ್ರೆಗೆ - Karavali Times

728x90

2 December 2025

ಗೂಡಿನಬಳಿ : ಅಟೋ ರಿಕ್ಷಾ ಮಗುಚಿ ಪ್ರಯಾಣಿಕ ಆಸ್ಪತ್ರೆಗೆ

ಬಂಟ್ವಾಳ, ಡಿಸೆಂಬರ್ 02, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ರೈಲ್ವೆ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಅಟೋ ರಿಕ್ಷಾ ಮಗುಚಿ ಬಿದ್ದು ಪ್ರಯಾಣಿಕರೋರ್ವರು ಗಾಯಗೊಂಡ ಘಟನೆ ನ 30 ರಂದು ಸಂಭವಿಸಿದೆ. 

ಗಾಯಾಳುವನ್ನು ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಪಂಜಿಮಾಡಿ ನಿವಾಸಿ ಇಬ್ರಾಹಿಂ (64) ಎಂದು ಹೆಸರಿಸಲಾಗಿದೆ. 

ಇವರು ನ 30 ರಂದು ಅಟೋ ರಿಕ್ಷಾದಲ್ಲಿ  ಮಹಮ್ಮದ್ ಎಂಬವರ ಜೊತೆಯಲ್ಲಿ ಅಕ್ಕರಂಗಡಿಯಿಂದ ಬಿ ಸಿ ರೋಡು ಕಡೆಗೆ ಸಂಚರಿಸುತ್ತಿದ್ದಾಗ ಬಿ ಮೂಡ ಗ್ರಾಮದ ರೈಲ್ವೆ ನಿಲ್ದಾಣದ ಮುಂಭಾಗ ಚಾಲಕನ ದುಡುಕುತನ ಹಾಗೂ ಅಜಾಗರೂಕತೆಯಿಂದ ಅಟೋ ರಿಕ್ಷಾ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಇಬ್ರಾಹಿಂ ಅವರು ಗಾಯಗೊಂಡಿದ್ದು, ಅವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೊಲೆಸೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗೂಡಿನಬಳಿ : ಅಟೋ ರಿಕ್ಷಾ ಮಗುಚಿ ಪ್ರಯಾಣಿಕ ಆಸ್ಪತ್ರೆಗೆ Rating: 5 Reviewed By: karavali Times
Scroll to Top