ಬಂಟ್ವಾಳ, ಡಿಸೆಂಬರ್ 04, 2025 (ಕರಾವಳಿ ಟೈಮ್ಸ್) : ಚೆನ್ನೈತ್ತೋಡಿ ಗ್ರಾಮದ ವಾಮದಪದವು ಎಂಬಲ್ಲಿ ಡಿ 3 ರಂದು ಖಾಸಗಿ ಖಾಲಿ ಜಮೀನು ಸ್ವಚ್ಛಗೊಳಿಸುತ್ತಿದ್ದಾಗ ಅಲ್ಲಿದ್ದ ಪಾಳು ಬಿದ್ದ ಬಾವಿಯಲ್ಲಿ ಅಪರಿಚಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಉಳ್ಳಾಲ ತಾಲೂಕು, ಕಾಪಿಕಾಡು ನಿವಾಸಿ ಮನ್ವಿತ್ (26) ಅವರು ತನ್ನ ತಂದೆಯ ಬಾಬ್ತು ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾಮದ ವಾಮದಪದವು ಎಂಬಲ್ಲಿ ಸುಮಾರು 62 ಸೆಂಟ್ಸ್ ಜಾಗವಿದ್ದು, ಅದರಲ್ಲಿ ಯಾವುದೇ ಮನೆ ಇರುವುದಿಲ್ಲ. ಸದ್ರಿ ಜಾಗದಲ್ಲಿ ಐದಾರು ತೆಂಗಿನ ಹಳೆಯ ಮರಗಳಿದ್ದು, ಜಾಗದ ಮಧ್ಯದಲ್ಲಿ ಒಂದು ಹಳೆಯ ಪಾಳು ಬಿದ್ದ ಬಾವಿ ಇರುತ್ತದೆ. ಸದ್ರಿ ಜಾಗವನ್ನು ಮುಂದಿನ ಎರಡು ವಾರದೊಳಗೆ ಅಳತೆ ಮಾಡುವ ಉದ್ದೇಶದಿಂದ ಅದರಲ್ಲಿದ್ದ ಪೆÇದೆಗಳನ್ನು, ಹುಲ್ಲನ್ನು ಸ್ವಚ್ಚಗೊಳಿಸುವ ಸಲುವಾಗಿ ಡಿ 3 ರಂದು ಕೆಲಸದವರಲ್ಲಿ ಯಂತ್ರದ ಮೂಲಕ ಕಳೆ ಗಿಡಗಳನ್ನು ಸ್ವಚ್ಚಗೊಳಿಸುತ್ತಿದ್ದಾಗ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಬಾವಿ ಸುತ್ತ ಹುಲ್ಲು ತೆಗೆಯುವಾಗ ಬಾವಿಯ ಒಳಗೆ ಯಾವುದೋ ವ್ಯಕ್ತಿಯ ಮೃತದೇಹವು ಕವಚಿ ಬಿದ್ದುಕೊಂಡಿರುವುದು ಕಂಡು ಬಂದಿದೆ. ಅಪರಿಚಿತ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಅಥವಾ ಇನ್ಯಾವುದೋ ಉದ್ದೇಶದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದ್ದು, ಮೃತ ದೇಹ ಮೇಲ್ನೋಟಕ್ಕೆ ಕಾಣುವಾಗ ಸುಮಾರು 50-60 ವರ್ಷ ಪ್ರಾಯದಂತೆ ಕಂಡು ಬರುತ್ತಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.














0 comments:
Post a Comment