ಬೆಳ್ತಂಗಡಿ, ಡಿಸೆಂಬರ್ 04, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟಲು ಅಜ್ಜನ ಜೊತೆ ನಿಂತಿದ್ದ ಮೂರು ವರ್ಷದ ಮಗು ಮೃತಪಟ್ಟ ಘಟನೆ ಚಾರ್ಮಾಡಿ ಗ್ರಾಮದ ಬೀಟಿಗೆ ಬಳಿ ಬುಧವಾರ ಅಪರಾಹ್ನ ಸಂಭವಿಸಿದೆ.
ಮೃತ ಬಾಲಕನನ್ನು ಸಿದ್ದೀಕ್ ಎಂಬವರ ಪುತ್ರ ಅಝ್ಲೀನ್ ಸಿದ್ದೀಕ್ (3 ವರ್ಷ) ಎಂದು ಹೆಸರಿಸಲಾಗಿದೆ. ಡಿ 3 ರಂದು ಅಪರಾಹ್ನ ಸುಮಾರು 3.40 ರ ವೇಳೆಗೆ ಘಟನೆ ಸಂಭವಿಸಿದ್ದು, ಮಗು ತನ್ನ ಅಜ್ಜನ ಜೊತೆ ರಸ್ತೆ ದಾಟಲು ನಿಂತಿದ್ದ ವೇಳೆ ಮುಹಮ್ಮದ್ ರಫೀಕ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಮಗು ರಸ್ತೆಗೆಸೆಯಲ್ಪಟ್ಟು ಮೈಕೈ ಹಾಗೂ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅಪಘಾತಪಡಿಸಿದ ಅದೇ ಕಾರಿನಲ್ಲಿ ಕಕ್ಕಿಂಜೆಯ ಕೃಷ್ಣ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ದಾರಿ ಮಧ್ಯೆ ಮೃತಪಟ್ಟಿದೆ ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment