ಬಂಟ್ವಾಳ, ಡಿಸೆಂಬರ್ 18, 2025 (ಕರಾವಳಿ ಟೈಮ್ಸ್) : ವಾಮದಪದವು ಕುಲಾಲ ಸಂಘ ಇದರ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಡಿ 14 ರಂದು ನಡೆಯಿತು.
ನಡುಬೊಟ್ಟು ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ದರ್ಮದರ್ಶಿ ಡಾ. ರವಿ ಎನ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆ ಒಕ್ಕೂಟದ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಕೇರಳ ಗ್ರಾಮೀಣ ಬ್ಯಾಂಕ್ ಕೋಶಾಧಿಕಾರಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ನಿವೃತ್ತ ಮ್ಯಾನೇಜರ್ ಈಶ್ವರ ಕುಲಾಲ್ ಕಣ್ವತೀರ್ಥ, ಬಂಟ್ವಾಳ ತಾಲೂಕು ಸುಧಾರಕ ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ, ಬೆಂಗಳೂರು ಉದ್ಯಮಿಗಳು ನಮನ ಇಂಡಸ್ಟ್ರೀಸ್ ಇದರ ಆಕಾಶ್ ಮಾಣೂರು, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ, ಬಂಟ್ವಾಳ ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಸುಮಿತ್ ಸೋರ್ನಾಡ್, ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಪ್ರವೀಣ್ ಬಸ್ತಿ, ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಉದ್ಯಮಿ ಪ್ರಿಯಾ ಸತೀಶ್ ಕುಲಾಲ್, ಮೋಹನ್ ಕುಲಾಲ್ ಬಂಟ್ವಾಳ, ಡೀಕಯ್ಯ ಕುಲಾಲ್ ಕಕ್ಯಪದವು, ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸೇಸಪ್ಪ ಮಾಸ್ಟರ್, ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮಮಾಥ ಕುಲಾಲ್ ಬಂಟ್ವಾಳ, ಭಜರಂಗದಳ ಕರ್ನಾಟಕ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್, ನೃತ್ಯ ತರಬೇತಿದಾರರ ಮಹೇಶ್ ಕುಲಾಲ್ ಕಡೇಶಿವಾಲಯ, ಮೂಡಬಿದ್ರೆ ಕುಲಾಲ ಸಂಘದ ಗೌರವಾಧ್ಯಕ್ಷ ಶಂಕರ್ ಕುಲಾಲ್ ಮೂಡಬಿದ್ರೆ, ಬಂಟ್ವಾಳ ವ್ಯವಸಾಯ ಸೇವಾ ಸಂಘದ ನಿರ್ದೇಶಕಿ ಜಯಂತಿ ಅಶೋಕ್ ಕುಲಾಲ್ ಕಾಮಾಜೆ, ಮಂಗಳೂರು ತೇಜಸ್ವಿನಿ ಆಸ್ಪತ್ರೆ ಕನ್ಸಲ್ಟಂಟ್ ಸ್ಟೈನ್ ಸರ್ಜನ್ ಶ್ರೀನಿವಾಸ ಎನ್, ವೇಣೂರು ಕುಂಭಶ್ರೀ ರೆಸಿಡೆನ್ಸಿಯಲ್ ಕಾಲೇಜು ಸ್ಥಾಪಕ ಗಿರೀಶ್ ಕೆ ಎಚ್ ಭಾಗವಹಿಸಿದ್ದರು.
ಇದೇ ವೇಳೆ ದ ಕ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಯುವವೇದಿಕೆ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಮಾಜಿ ಸೈನಿಕ ದಿನೇಶ್ ಬಿ ನೆಟ್ಲ, ಹೆಡ್ ಕಾನ್ ಸ್ಟೇಬಲ್ ಪ್ರದೀಪ್ ಕುಲಾಲ್ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಧನುಷ್ ಎ ಕುಲಾಲ್, ಅಕ್ಷಿತಾ, ಸುಪ್ರಿಯಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಬಸ್ತಿಕೋಡಿ ಮತ್ತು ಮಹಿಳಾ ಸಮಿತಿ ಅಧ್ಯಕ್ಷೆ ವಿಶಾಲಾಕ್ಷಿ ಕುಲಾಲ್ ಉಪಸ್ಥಿತರಿದ್ದರು. ಮಾನ್ವಿತಾ, ಪ್ರಕೃತಿ, ಸಾಗರ್ ಪ್ರಾರ್ಥಿಸಿದರು. ಪ್ರತೀಕ್ಷಾ ಸ್ವಾಗತಿಸಿ, ಚಿತ್ತರಂಜನ್ ಕುಲಾಲ್ ವಂದಿಸಿದರು. ಸಂತೋಷ್ ಕುಲಾಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.














0 comments:
Post a Comment