ಮಂಗಳೂರು, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾಡಳಿತ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಆಯೋಜಿಸುವ ಕರಾವಳಿ ಉತ್ಸವ-2025 ರ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ಡಿಸೆಂಬರ್ 27 ಮತ್ತು 28 ರಂದು ಉಳ್ಳಾಲ ಬೀಚಿನಲ್ಲಿ ನಡೆಯಲಿದೆ.
ಡಿಸೆಂಬರ್ 27 ರಂದು 17 ವರ್ಷದ ಕೆಳಗಿನ ಹುಡುಗ-ಹುಡುಗಿಯರ ಮತ್ತು 28 ರಂದು ಪುರುಷ-ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9481016452 ಅಥವಾ 9481352319 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.














0 comments:
Post a Comment