ಬಂಟ್ವಾಳ, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ಕಳ್ಳಿಗೆ ಗ್ರಾಮದ ನೆತ್ರಕೆರೆ ಎಂಬಲ್ಲಿ ಹೋಟೇಲಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಮಾರಾಟ ಮಾಡಲು ತಂದಿಟ್ಟಿದ್ದ ಅಕ್ರಮ ಮದ್ಯ ಹಾಗೂ ಮಾರಾಟ ಮಾಡಿ ಬಂದ ನಗದು ಹಣವನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ರಾತ್ರಿ ವೇಳೆ ನಡೆದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಅವರು ಕಳ್ಳಿಗೆ ಗ್ರಾಮದ ಬೀಟ್ ಸಿಬ್ಬಂದಿ ಮಹೇಂದ್ರ ಅವರು ನೀಡಿದ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ನೆತ್ರರಕೆರೆ ಎಂಬಲ್ಲಿ ಹರೀಶ್ (45) ಎಂಬವರ ಹೋಟೇಲಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಕ್ಕೆ ದಾಳಿ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ದಾಳಿ ವೇಳೆ ಹೋಟೇಲಿನ ಟೇಬಲ್ ಕೆಳಗೆ ಒಂದು ರಟ್ಟಿನ ಬಾಕ್ಸಿನಲ್ಲಿ ಮದ್ಯದ ಸ್ಯಾಚೆಟುಗಳು ಕಂಡು ಬಂದಿದೆ. ಒರಿಜಿನಲ್ ಚಾಯ್ಸ್ ಎಂದು ಬರೆದಿರುವ ತಲಾ 50 ರೂಪಾಯಿ ಬೆಲೆಯ 90 ಮಿಲಿ ಲೀಟರಿನ 80 ಸ್ಯಾಚೆಟುಗಳಿದ್ದವು. ಇವುಗಳ ಒಟ್ಟು ಮೌಲ್ಯ 4 ಸಾವಿರ ರೂಪಾಯಿಗಳು ಹಾಗೂ ಮದ್ಯವನ್ನು ಗಿರಾಕಿಗಳಿಗೆ ಮಾರಾಟ ಮಾಡಿ ಗಳಿಸಿದ 1 ಸಾವಿರ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment