ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಆರೋಪಿಯ ಮನೆ ಹಾಗೂ ಕೊಟ್ಟಿಗೆ ಜಫ್ತಿ - Karavali Times ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಆರೋಪಿಯ ಮನೆ ಹಾಗೂ ಕೊಟ್ಟಿಗೆ ಜಫ್ತಿ - Karavali Times

728x90

14 December 2025

ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಆರೋಪಿಯ ಮನೆ ಹಾಗೂ ಕೊಟ್ಟಿಗೆ ಜಫ್ತಿ

ಬಂಟ್ವಾಳ, ಡಿಸೆಂಬರ್ 15, 2025 (ಕರಾವಳಿ ಟೈಮ್ಸ್) : ತಾಲೂಕಿನ ಉಳಿ ಗ್ರಾಮದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಶನಿವಾರ ಅಕ್ರಮ ಗೋ ಸಾಗಾಟ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೆÇಲೀಸರು ಜಾನುವಾರು ವಶಕ್ಕೆ ಪಡೆದುಕೊಂಡು ಆರೋಪಿಯ ಮನೆ ಹಾಗೂ ಕೊಟ್ಟಿಗೆ ಜಪ್ತಿ ಮಾಡಿದ್ದಾರೆ.

ಡಿ 13 ರಂದು ಸಂಜೆ ಉಳಿ ಗ್ರಾಮದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಅಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ಪಿಎಸ್ಸೈ ಸಿಬ್ಬಂದಿಗಳೊಂದಿಗೆ ತೆರಳಿ ಕೆಎ70 8686 ನೊಂದಣಿಯ ಗೂಡ್ಸ್ ಅಟೋ ತಡೆದು ಪರಿಶೀಲಿಸಿದಾಗ, ಅದರಲ್ಲಿ ಒಂದು ಜಾನುವಾರು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿದೆ. ವಾಹನದ ಚಾಲಕರಲ್ಲಿ ಈ ಬಗ್ಗೆ ವಿಚಾರಿಸಿದಾಗ, ಆತ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ (56) ಎಂದು ತಿಳಿದು ಬಂದಿದ್ದು, ಸರಪಾಡಿ ನಿವಾಸಿ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲಾತಿ, ಪರವಾನಿಗೆ ಇಲ್ಲದೇ ಎಲ್ಲಿಯೋ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿರುವುದು ಕಂಡು ಬಂದಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ ಜಾನುವಾರು, ಅಟೋ ಹಾಗೂ ಒಂದು ಮೊಬೈಲ್ ಫೆÇೀನ್ ವಶಕ್ಕೆ ಪಡೆದು ಅರೋಪಿಗಳ ವಿರುದ್ಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2025, ಕಲಂ 5, 7, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ 11(1)(ಡಿ) ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಆರೋಪಿ ಭೋಜ ಮೂಲ್ಯ ಅವರ  ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಆರೋಪಿಯ ಮನೆ ಹಾಗೂ ಕೊಟ್ಟಿಗೆ ಜಫ್ತಿ Rating: 5 Reviewed By: karavali Times
Scroll to Top