ಜನವರಿ 22 ರಿಂದ 24 ರವರೆಗೆ ಮಣಿಪುರ-ಕಟಪಾಡಿಯಲ್ಲಿ ಜಲಾಲಿಯಾ ದ್ಸಿಕ್ರ್ ಮಜ್ಲಿಸ್, ಅನುಸ್ಮರಣಾ ಮಜ್ಲಿಸ್, ಧಾರ್ಮಿಕ ಪ್ರಭಾಷಣ ಹಾಗೂ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ - Karavali Times ಜನವರಿ 22 ರಿಂದ 24 ರವರೆಗೆ ಮಣಿಪುರ-ಕಟಪಾಡಿಯಲ್ಲಿ ಜಲಾಲಿಯಾ ದ್ಸಿಕ್ರ್ ಮಜ್ಲಿಸ್, ಅನುಸ್ಮರಣಾ ಮಜ್ಲಿಸ್, ಧಾರ್ಮಿಕ ಪ್ರಭಾಷಣ ಹಾಗೂ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ - Karavali Times

728x90

21 January 2026

ಜನವರಿ 22 ರಿಂದ 24 ರವರೆಗೆ ಮಣಿಪುರ-ಕಟಪಾಡಿಯಲ್ಲಿ ಜಲಾಲಿಯಾ ದ್ಸಿಕ್ರ್ ಮಜ್ಲಿಸ್, ಅನುಸ್ಮರಣಾ ಮಜ್ಲಿಸ್, ಧಾರ್ಮಿಕ ಪ್ರಭಾಷಣ ಹಾಗೂ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ

ಉಡುಪಿ, ಜನವರಿ 21, 2026 (ಕರಾವಳಿ ಟೈಮ್ಸ್) : ಜಿಲ್ಲೆಯ ಮಣಿಪುರ-ಕಟಪಾಡಿಯ ರಹ್ಮಾನಿಯಾ ಜುಮಾ ಮಸೀದಿ ಅಧೀನದಲ್ಲಿರುವ ಖಲಂದರ್ ಷಾ ದಫ್ ಸಮಿತಿಯ ಆಶ್ರಯದಲ್ಲಿ ತ್ರಿದಿನಗಳ ಧಾರ್ಮಿಕ ಕಾರ್ಯಕ್ರಮ ಜನವರಿ 22, 23 ಹಾಗೂ 24 ರಂದು ಇಲ್ಲಿನ ಮಸೀದಿ ವಠಾರದಲ್ಲಿ ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. 

ಜನವರಿ 22 ರಂದು ಗುರುವಾರ ಮಗ್ರಿಬ್ ಬಳಿಕ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಬೃಹತ್ ಜಲಾಲಿಯಾ ದ್ಸಿಕ್ರ್ ಮಜ್ಲಿಸ್ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಕೂರತ್ ತಂಙಳ್, ಪೋಸೋಟು ತಂಙಳ್, ಬೇಕಲ್ ಉಸ್ತಾದ್, ಕೂರತ್ ತಂಙಳ್ ಹಾಗೂ ಅಗಲಿದ ಇನ್ನಿತರ ಉಲಮಾ-ಉಮರಾಗಳ ಅನುಸ್ಮರಣಾ ಮಜ್ಲಿಸ್ ನಡೆಯಲಿದೆ. ಮಣಿಪುರ ಮಸೀದಿ ಖತೀಬ್ ಹಾಜಿ ಉಮರ್ ಕುಂಞÂ ಬದವಿ ಅನುಸ್ಮರಣಾ ಭಾಷಣಗೈಯುವರು. ಮದ್ರಸ ಅಧ್ಯಾಪಕ ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ಉದ್ಘಾಟಿಸುವರು. ಮಸೀದಿ ಅಧ್ಯಕ್ಷ ರಫೀಕ್ ಕೆ ಶಾಬಾನ್ ಅಧ್ಯಕ್ಷತೆ ವಹಿಸುವರು. 

ಜನವರಿ 23 ರಂದು ಶುಕ್ರವಾರ ಮಗ್ರಿಬ್ ಬಳಿಕ ವಾರ್ಷಿಕ ದ್ಸಿಕ್ರ್ ಮಜ್ಲಿಸ್ ಹಾಗೂ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು, ಮಣಿಪುರ ಮಸೀದಿ ಖತೀಬ್ ಹಾಜಿ ಉಮರ್ ಕುಂಞÂ ಬದವಿ ಝಿಕ್ರ್ ಮಜ್ಲಿಸ್ ನೇತೃತ್ವ ವಹಿಸುವರು. ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಅಲ್-ಕಾಮಿಲ್ ಕಿಲ್ಲೂರು ಮುಖ್ಯ ಭಾಷಣಗೈಯುವರು. 

ಜನವರಿ 24 ರಂದು ಶನಿವಾರ ಮಗ್ರಿಬ್ ನಮಾಝ್ ಬಳಿಕ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಮಣಿಪುರ ಮಸೀದಿ ಅಧ್ಯಕ್ಷ ರಫೀಕ್ ಕೆ ಶಾಬಾನ್, ಖತೀಬ್ ಹಾಜಿ ಉಮರ್ ಕುಂಞÂ ಬದವಿ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಉಡುಪಿ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸುವರು. 

ದಫ್ ಸ್ಪರ್ಧಾ ವಿಜೇತ ತಂಡಗಳಿಗೆ ಎ ಗ್ರೂಪ್ ವಿಭಾಗದಲ್ಲಿ ಪ್ರಥಮ 10,010/- ರೂಪಾಯಿ, ದ್ವಿತೀಯ 7,010/- ರೂಪಾಯಿ, ತೃತೀಯ 4,010/- ರೂಪಾಯಿ ನಗದು ಹಾಗೂ ಸ್ಮರಣಿಕೆ ಮತ್ತು ಬಿ ಗ್ರೂಪ್ ವಿಭಾಗದಲ್ಲಿ ಪ್ರಥಮ 7,010/- ರೂಪಾಯಿ, ದ್ವಿತೀಯ 5,010/- ರೂಪಾಯಿ, ತೃತೀಯ 3,010/- ರೂಪಾಯಿ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ರಹ್ಮಾನಿಯಾ ಜುಮಾ ಮಸೀದಿ ಹಾಗೂ ಖಲಂದರ್ ಷಾ ದಫ್ ಸಮಿತಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜನವರಿ 22 ರಿಂದ 24 ರವರೆಗೆ ಮಣಿಪುರ-ಕಟಪಾಡಿಯಲ್ಲಿ ಜಲಾಲಿಯಾ ದ್ಸಿಕ್ರ್ ಮಜ್ಲಿಸ್, ಅನುಸ್ಮರಣಾ ಮಜ್ಲಿಸ್, ಧಾರ್ಮಿಕ ಪ್ರಭಾಷಣ ಹಾಗೂ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ Rating: 5 Reviewed By: karavali Times
Scroll to Top