ಬಂಟ್ವಾಳ, ಜನವರಿ 21, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಪೊಸಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ಬೆಳಿಗ್ಗೆ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಮೃತದೇಹ ಪತ್ತೆಯಾಗಿದೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಮೃತದೇಹದ ಮೇಲೆ ಗ್ರೇ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕೆಂಪು-ಹಳದಿ ಬಣ್ಣದಿಂದ ಕೂಡಿದ ಕಂಬಳಿ ಮತ್ತು ಕಂದು ಬಣ್ಣದ ಜರ್ಕಿನ್ ಇತ್ತು. ಬಲ ಕೈ ಮುಷ್ಠಿ ಹಿಡಿದ ಸ್ಥಿತಿಯಲ್ಲಿದ್ದು, ಎಡ ಗೈ ಮುಂಗೈ ಇರುವುದಿಲ್ಲ. ಮೃತದೇಹದ ಮುಖ, ಕಣ್ಣುಗಳು, ಕಿವಿಗಳು, ಹಲ್ಲುಗಳೆಲ್ಲವೂ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು, ಸುಮಾರು 35 ರಿಂದ 45 ವರ್ಷ ವಯಸ್ಸಿನ ಗಂಡಸಿನ ಮೃತದೇಹ ಇದಾಗಿದೆ ಎಂದು ಅಂದಾಜಿಸಲಾಗಿದ್ದು, ಯಾವುದೇ ಗುರುತು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಪುರಸಭಾ ಮಾಜಿ ಸದಸ್ಯ ಭಂಡಾರಿಬೆಟ್ಟು ನಿವಾಸಿ ಹರಿಪ್ರಸಾದ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆ ಪ್ರಕರಣ ದಾಖಲಾಗಿದೆ.












0 comments:
Post a Comment