ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಪೇಟೆಯಲ್ಲಿ ಟ್ರಾಫಿಕ್ ಪೊಲೀಸ್ ಹೆಸರಿನಲ್ಲಿದ್ದ ನೋ ಪಾರ್ಕಿಂಗ್ ನಾಮಫಲಕ ಮಾಯವಾದ ಬಗ್ಗೆ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಡಾ ಅರುಣ್ ಅವರು ಸ್ಪಷ್ಟನೆ ನೀಡಿದ್ದಾರೆ.
ಬಿ ಸಿ ರೋಡು ಪೇಟೆಯಲ್ಲಿ ನೋ ಪಾರ್ಕಿಂಗ್ ಬೋರ್ಡನ್ನು ಸುಮಾರು 1 ವರ್ಷದ ಹಿಂದೆ ಬಿ ಸಿ ರೋಡಿನ ವೈ ಬಿ ಯೂನಸ್ ಜನರಲ್ ಸ್ಟೋರ್ ಮುಂಭಾಗದ ಸ್ಥಳದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯವರು ಅಳವಡಿಸಿದ್ದು, ಸುಮಾರು 2 ವಾರಗಳ ಹಿಂದೆ ಸದ್ರಿ ಬೋರ್ಡ್ ಗಾಳಿಯಿಂದಾಗಿ ವೆಲ್ಡಿಂಗ್ ತುಂಡಾಗಿ ಆಕಸ್ಮಿಕವಾಗಿ ಮುರಿದು ಬಿದ್ದಿರುತ್ತದೆ. ನಂತರ ಸದ್ರಿ ಬೋರ್ಡನ್ನು ಸಮೀಪದ ಮೆಡಿಕಲ್ ಅಂಗಡಿ ಸಿಬ್ಬಂದಿಗಳು ಯಾರಿಗೂ ತೊಂದರೆಯಾಗದಂತೆ ಅಂಗಡಿಯ ಬದಿಗೆ ಇಟ್ಟಿರುತ್ತಾರೆ. ಈ ಬೋರ್ಡನ್ನು ಮರು ಸ್ಥಾಪಿಸುವ ಬಗ್ಗೆ ದುರಸ್ತಿಪಡಿಸಿ ಬಂಟ್ವಾಳ ಪುರಸಭೆಯಿಂದ ಅನುಮತಿ ಪಡೆದು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಅವರು ಪತ್ರಿಕೆಗೆ ಪ್ರತಿಕ್ರಯಿಸಿದ್ದಾರೆ.















0 comments:
Post a Comment