ಬಂಟ್ವಾಳ, ಜನವರಿ 23, 2026 (ಕರಾವಳಿ ಟೈಮ್ಸ್) : ವಾಹನದ ಸಾಲ ಬ್ಯಾಂಕಿಗೆ ಬಾಕಿ ಇರಿಸಿ ಬ್ಯಾಂಕ್ ಅಧಿಕಾರಿಯ ಪೋರ್ಜರಿ ಸಹಿ ಮತ್ತು ನಕಲಿ ಪತ್ರ ಸಿದ್ದಪಡಿಸಿ ಸಾಲ ಪಾವತಿಯಾಗಿದೆ ಎಂದು ನಂಬಿಸಿ ಬಂಟ್ವಾಳ ಆರ್ ಟಿ ಒ ಕಚೇರಿಯಲ್ಲಿ ಋಣಭಾರ ಪಡೆದುಕೊಂಡು ವಾಹನವನ್ನು ಬೇರೆಯವರಿಗೆ ವರ್ಗಾವಣೆ ಮಾಡಿ ಬ್ಯಾಂಕಿಗೆ ವಂಚಿಸಿದ ಬಗ್ಗೆ ಬ್ಯಾಂಕ್ ಮುಖ್ಯಸ್ಥರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಪುತ್ತೂರು ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ಮತ್ತು ಪ್ರಾದೇಶಿಕ ಮುಖ್ಯಸ್ಥ ಅಮಿತ್ ಶೆಟ್ಟಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎದ್ರಿದಾರ 1ನೇ ಆರೋಪಿ ತನ್ಸೀರ್ ಮತ್ತು ಅವರ ತಾಯಿ 2ನೇ ಆರೋಪಿ ನೆಬೀಸ ಅವರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಕೆಎ70 6270 ನೋಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಲಾರಿಗೆ 2023 ರ ಮಾರ್ಚ್ 16 ರಂದು ಬ್ಯಾಂಕಿನಿಂದ 45 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಲಾಗಿತ್ತು.
1ನೇ ಆರೋಪಿಯು ಬ್ಯಾಂಕ್ ಸಾಲ ಬಾಕಿಯಿರುತ್ತಲೇ 2024 ರ ಅಕ್ಟೋಬರ್ 19 ರಂದು ಒಪ್ಪಂದ ಹಾಗೂ ಅಕ್ಟೋಬರ್ 22 ರಂದು ಅಧಿಕಾರ ಪತ್ರ ಬರೆದು 3ನೇ ಆರೋಪಿ ಜುನೈದ್ ಮೆಲ್ಕಾರ್ ಅಬ್ಬಾಸ್ ಎಂಬವರಿಗೆ ವಾಹನವನ್ನು ನೀಡಿರುತ್ತಾನೆ. ನಂತರ 2024ರ ಡಿಸೆಂಬರ್ 16 ರಂದು ಬ್ಯಾಂಕ್ ಅಧಿಕಾರಿಯ ಪೆÇೀರ್ಜರಿ ಸಹಿ ಮತ್ತು ನಕಲಿ ಪತ್ರ ಸಿದ್ಧಪಡಿಸಿ, ಸಾಲ ಸಂಪೂರ್ಣ ಪಾವತಿಯಾಗಿರುವುದಾಗಿ ತೋರಿಸಿ ಬಂಟ್ವಾಳ ಆರ್ ಟಿ ಒ ಕಚೇರಿಯಲ್ಲಿ ಋಣಭಾರ ತೆಗೆಯಿಸಿ, ಪೂರ್ವನಿಯೋಜಿತ ಷಡ್ಯಂತ್ರದ ಮೂಲಕ ವಾಹನವನ್ನು 4ನೇ ಆರೋಪಿ ರಮೀಝ್ ಅಲಿಶ್ ಎಂಬವರ ಹೆಸರಿಗೆ ವರ್ಗಾವಣೆ ಮಾಡಿರುತ್ತಾರೆ ಎಂದು ಬ್ಯಾಂಕ್ ಅಧಿಕಾರಿ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026 ಕಲಂ 336(2), 336(3), 340(2), 341(4), 318(2) (3) ಆರ್/ಡಬ್ಲ್ಯು 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.












0 comments:
Post a Comment